ಮಹಿಳೆಯರಿಗೆ ಆದರ್ಶವಾಗಲಿ ಸಾವಿತ್ರಿಬಾಯಿ ಫುಲೆ ಜೀವನ: ಯಲಬುರ್ಗಾ ಹೂಗಾರ ಮಹಾಸಭಾದ ಅಧ್ಯಕ್ಷ ವಿರೂಪಾಕ್ಷಪ್ಪ ಹೂಗಾರ್ ಸಲಹೆ

030122 Yalaburga Savitribai Pule Birthday
ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ಯಲಬುರ್ಗಾದಲ್ಲಿ ಹೂಗಾರ ಮಹಾಸಭಾದ ತಾಲೂಕು ಘಟಕದಿಂದ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್ ವಿತರಿಸಲಾಯಿತು.
Published on

ಯಲಬುರ್ಗಾ: ಸ್ತ್ರೀ ಶಿಕ್ಷಣಕ್ಕೆ ಒತ್ತು ನೀಡಿದ ಸಾವಿತ್ರಿಬಾಯಿ ಫುಲೆ ಅವರ ಜೀವನಾದರ್ಶವನ್ನು ಪ್ರತಿ ಮಹಿಳೆಯೂ ಅಳವಡಿಸಿಕೊಳ್ಳಬೇಕು ಎಂದು ಅಖಿಲ ಕರ್ನಾಟಕ ಹೂಗಾರ ಮಹಾಸಭಾದ ತಾಲೂಕು ಅಧ್ಯಕ್ಷ ವಿರೂಪಾಕ್ಷಪ್ಪ ಹೂಗಾರ್ ಹೇಳಿದರು.

ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತಿ ನಿಮಿತ್ತ ಪಟ್ಟಣದ ಕನ್ನಡ ಕ್ರಿಯಾಸಮಿತಿ ವೃತ್ತದಲ್ಲಿ ಮಹಾಸಭಾದ ತಾಲೂಕು ಘಟಕ ಸೋಮವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಪೆನ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾವಿತ್ರಿಬಾಯಿ ಜಯಂತಿಯನ್ನು ಶಿಕ್ಷಕಿಯರ ದಿನವೆಂದು ಆಚರಿಸುತ್ತಿರುವುದು ಸಂತಸದ ವಿಷಯ. ಶಿಕ್ಷಣದ ಅವಶ್ಯಕತೆ ಅರಿತ ಅವರ ಸಕಾರಾತ್ಮಕ ಚಿಂತನೆ, ಆತ್ಮವಿಶ್ವಾಸ ಮೆಚ್ಚಬೇಕು. ಅವಮಾನಗಳನ್ನು ಸಹಿಸಿ ಮಹಿಳೆಯರಿಗೆ ಶಿಕ್ಷಣ ಕೊಡಿಸುವ ಕನಸನ್ನು ಸಾಕಾರಗೊಳಿಸಿದ ಅವರ ದಿಟ್ಟತನ ಶ್ಲಾಘನಾರ್ಹ ಎಂದರು.

ಮಹಾಸಭಾದ ಉಪಾಧ್ಯಕ್ಷ ಮಹಾದೇವಪ್ಪ ಹೂಗಾರ್, ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಪೆನ್ ವಿತರಿಸಿದರು. ಮಹಾಸಭಾದ ಯುವಸೇನಾ ತಾಲೂಕು ಅಧ್ಯಕ್ಷ ಚನ್ನಪ್ಪ ಹೂಗಾರ್, ಪದಾಧಿಕಾರಿಗಳಾದ ಮಹಾದೇವಪ್ಪ ಹೂಗಾರ್, ಬಸವರಾಜ ಹೂಗಾರ್, ಪಂಪಣ್ಣ ಹೂಗಾರ್, ಸಂಗಮೇಶ ಹೂಗಾರ್, ಬಸವರಾಜ ಹೂಗಾರ್, ಮುತ್ತು, ಮಲ್ಲು, ಮಹೇಶ ಹೂಗಾರ್, ಮಹಾಂತೇಶ ಬನ್ನಿಕೊಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net