

ಸವಣೂರ: ನೀರು ಕಾಯಿಸಲು ಹೋದ ಮಹಿಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮೃತಪಟ್ಟ ಟನೆ ತಾಲೂಕಿನ ಹುರುಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.
ದೀಪಾ (ನೇಹಾ) ಯಲ್ಲಪ್ಪ ಕಲಾದಗಿ (21) ಮೃತ ಮಹಿಳೆ.
ಇವಳು ಮನೆಯಲ್ಲಿ ನೀರು ಕಾಯಿಸುವ ಸಲುವಾಗಿ ಒಲೆಗೆ ಡಿಸೇಲ್ ಹಾಕಿದ್ದರಿಂದ ಏಕಾಏಕಿ ಬೆಂಕಿ ತಗುಲಿದೆ. ಇದರಿಂದ ಗಂಭೀರವಾಗಿ ಅವಳನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.