ನಾಗರಪಂಚಮಿಗೆ ತೆರಳುತ್ತಿದ್ದಾಗ ಬೈಕ್‌ನಿಂದ ಬಿದ್ದು ಮಹಿಳೆ ಸಾವು

accident
Published on

ಶಿರ್ವ: ನಾಗರ ಪಂಚಮಿ ಪೂಜೆಗೆ ತೆರಳುತ್ತಿದ್ದಾಗ ಸೂಡ ಮಕ್ಕೇರಿಬೈಲಿನಲ್ಲಿ ಬೈಕಿನಿಂದ ಬಿದ್ದು ಬೈಲೂರು ಸಮೀಪದ ಕಣಂಜಾರು ನಿವಾಸಿ ಪುಷ್ಪಾ ಪೂಜಾರ್ತಿ(55) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಗಬನಕ್ಕೆ ತೆರಳುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಬೈಕ್ ಸಹ ಸವಾರನೂ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಶಿರ್ವ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net