ಬೈಕ್​ ಅಪಘಾತ; ಕೆಳಗೆ ಬಿದ್ದ ಮಹಿಳೆ ಸಾವು

Crime Logo
Published on

ಹಿರೇಕೆರೂರ: ಬಸ್​ ಓವರ್​ಟೇಕ್​ ಮಾಡಲು ಹೋಗಿ ಬೈಕ್​ವೊಂದು ರಸ್ತೆ ಬದಿಯ ಕಬ್ಬಿಣದ ಪೆಟ್ಟಿಗೆಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಹಿಂಬದಿ ಕುಳಿತ್ತಿದ್ದ ಮಹಿಳೆ ಮೃತಪಟ್ಟು ಮೈಕ್​ ಸವಾರ ಗಾಯಗೊಂಡ ಘಟನೆ ತಾಲೂಕಿನ ಚಿಕ್ಕೇರೂರ-ಹಂಸಬಾವಿ ರಸ್ತೆಯಲ್ಲಿ ಸೋಮವಾರ ನಡೆದಿದೆ.

ಚಿಕ್ಕೇರೂರ ಗ್ರಾಮದ ಖಾಸಗಿ ಶಾಲೆ ಶಿಕ್ಷಕಿ ಅಪಿರ್ತಾ ಚಂದ್ರಪ್ಪ ಸನ್ನೇರ (28) ಮೃತಳು. ಬೈಕ್​ ಸವಾರ ರೋಹಿತ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಚಿಕ್ಕೇರೂರ ಗ್ರಾಮದಿಂದ ಹಂಸಬಾವಿ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ ಮುಂದೆ ಹೊರಟ್ಟಿದ್ದ ಬಸ್​ ಓವರ್​ಟೇಕ್​ ಮಾಡಲು ಹೋಗಿ ರಸ್ತೆ ಬದಿಯ ಕಬ್ಬಿಣದ ಪೆಟ್ಟಿಗೆಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕೆಳಗೆ ಬಿದ್ದ ಅಪಿರ್ತಾ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಕುರಿತು ಹಂಸಬಾವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net