ಮನೆ ಗೋಡೆ ಕುಸಿದು ಅಪಾಯದಿಂದ ಮಹಿಳೆ ಪಾರು

19-12-24--krs1
ಬೆಳಗೊಳ ಗ್ರಾಮದ ಹಿರಿದೇವಿ ಬಡಾವಣೆಯ ನಿವಾಸಿ ನಾಗಮ್ಮ ಅವರ ಮನೆ ಗೋಡೆ ಕುಸಿದಿರುವುದನ್ನು ಗ್ರಾ.ಪಂ ಸದಸ್ಯ ಬಿ.ವಿ.ಸುರೇಶ್ ಗುರುವಾರ ಪರಿಶೀಲಿಸಿದರು.
Published on

ಕೆ.ಆರ್.ಸಾಗರ: ಬೆಳಗೊಳ ಗ್ರಾಮದ ಹಿರಿದೇವಿ ಬಡಾವಣೆಯ ನಿವಾಸಿ ನಾಗಮ್ಮ ಎಂಬುವರಿಗೆ ಸೇರಿದ ಮನೆ ಗೋಡೆ ಬುಧವಾರ ಮಧ್ಯರಾತ್ರಿ ಏಕಾಏಕಿ ಕುಸಿದಿದ್ದು, ಮನೆಯೊಡತಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಕೂಲಿ ಕೆಲಸ ಮಾಡುವ ನಾಗಮ್ಮ ಅವರು ಪತಿ ರಾಚಯ್ಯ ನಿಧನದ ನಂತರ ಒಬ್ಬರೇ ಹೆಂಚಿನ ಮನೆಯಲ್ಲಿ ವಾಸವಾಗಿದ್ದರು. ಇವರು ಮನೆಯಲ್ಲಿ ಎಂದಿನಂತೆ ಮಲಗಿದ್ದ ವೇಳೆ ಬುಧವಾರ ಮಧ್ಯರಾತ್ರಿ ಗೋಡೆ ಏಕಾಏಕಿ ಕುಸಿದು ಹಲವಾರು ವಸ್ತುಗಳು ಜಖಂಗೊಂಡಿವೆ. ಹತ್ತಿರದಲ್ಲೇ ಮಲಗಿದ್ದ ನಾಗಮ್ಮ ಯಾವುದೇ ಅಪಾಯವಿಲ್ಲದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.

ಸ್ಥಳಕ್ಕೆ ವಾರ್ಡ್ ಗ್ರಾಪಂ ಸದಸ್ಯ ಬಿ.ವಿ.ಸುರೇಶ್ ಭೇಟಿ ನೀಡಿ ಬೆಳಗೊಳ ಗ್ರಾಪಂ ಹಾಗೂ ಶಾಸಕರ ವತಿಯಿಂದ ಮತ್ತು ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net