ಅಪಘಾತದಲ್ಲಿ ಮಹಿಳೆ ಸಾವು, ಮೂವರಿಗೆ ಗಾಯ

accident
Published on

ಬೇತಮಂಗಲ: ಬೆಂಗಳೂರು& ಚೆನ್ನೆ$ ಕಾರಿಡಾರ್​ನ ಸುಂದರಪಾಳ್ಯ ಟೋಲ್​ ಸಂಗ್ರಹ ಕೇಂದ್ರದ ಸಮೀಪ ಬುಧವಾರ ಬೆಳಗ್ಗೆ ಕಾರೊಂದು ಡಿವೈಡರ್​ಗೆ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ಚೆನ್ನೆ$ನ ದಾಕ್ಷಾಯಿಣಿ (60) ಮೃತ ಮಹಿಳೆ. ಷಷ್ಠಿ ಪೂಜೆಗೆಂದು ಕುಟುಂಬ ಸಮೇತ ಚೆನ್ನೆ$ಗೆ ಕಾರಿನಲ್ಲಿ ತೆರಳುತ್ತಿದ್ದಾಗ ಅವಡ ಸಂಭವಿಸಿದೆ. ಕಾರು ಚಾಲನೆ ಮಾಡುತ್ತಿದ್ದ ದಾಾಯಿಣಿ ಪುತ್ರ ಸುಧೀರ್​ ತೀವ್ರ ಗಾಯಗೊಂಡಿದ್ದು, ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತೆಯ ಸೊಸೆ ಪ್ರಿಯದರ್ಶಿನಿ, ಮತ್ತೊಬ್ಬ ಮಗ ಸುಮನ್​ ಅವರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೂಲತ@ ಚೆನ್ನೆ$ನ ಮಹಾಲಕ್ಷಿ$್ಮಪುರ ನಿವಾಸಿಗಳಾಗಿದ್ದು, ಇಬ್ಬರು ಮಕ್ಕಳು ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದು, ತಾಯಿ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ತಂದೆ ಚೆನ್ನೆ$ನಲ್ಲೇ ಇದ್ದ ಕಾರಣ ತಂದೆ&ತಾಯಿ ಷಷ್ಠಿಪೂಜೆ ಆಚರಣೆ ಮಾಡಲು ಬೆಳಗಿನ ಜಾವ ಬೆಂಗಳೂರು ಬಿಟ್ಟು ಹೊಸಕೋಟೆ ಬಳಿ ಬೆಂಗಳೂರು & ಚೆನ್ನೆ$ ಕಾರಿಡಾರ್​ನಲ್ಲಿ ಚೆನ್ನೆ$ಗೆ ಹೊರಟಿದ್ದಾರೆ. ಎಕ್ಸ್​ಪ್ರೆಸ್​ ಹೈವೇ ಇನ್ನೇನು ಕೊನೆಗೊಂಡು ಸುಂದರಪಾಳ್ಯ ಟೋಲ್​ ಸಂಗ್ರಹ ಕೇಂದ್ರಕ್ಕೆ ತಲುಪಲು 1ಕಿ.ಮೀ. ಮೊದಲೇ ವದ್ದರಹಳ್ಳಿ ಬಳಿ ಮೇಲ್ಸೇತುವೆ ಸಮೀಪ ಕಾರು ಡಿವೈಡರ್​ಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರು ಪಲ್ಟಿಯಾಗಿ ಹಿಂದೆ ಕುಳಿತಿದ್ದ ದಾಕ್ಷಾಯಿಣಿ ಕೆಳಗೆ ಬಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೇತಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net