ಮುಳಬಾಗಿಲು: ತಾಲೂಕಿನ ಬೈರಕೂರು ಹೋಬಳಿ ಬ್ಯಾಡರಹಳ್ಳಿಯಲ್ಲಿ ಸೋಮವಾರ ವಿವಾಹಿತ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಕೆಜಿಎ್ ತಾಲೂಕು ಬೇತಮಂಗಲದ ಹನುಮಂತನಗರ ಮೂಲದ ದಿವ್ಯಶ್ರೀ (27) ಮೃತೆ.
6 ವರ್ಷಗಳ ಹಿಂದೆ ಬ್ಯಾಡರಹಳ್ಳಿಯ ಆರ್.ಕದಿರೆಪ್ಪ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೃತಳ ತಾಯಿ ಸುಜಾತಮ್ಮ ನೀಡಿದ ದೂರಿನ ಮೇರೆಗೆ ಗಂಡ ಕದಿರೆಪ್ಪ, ಈತನ ಸಹೋದರ ನರಸಿಂಹನ ಮೇಲೆ ಅನುಮಾನ ವ್ಯಕ್ತಪಡಿಸಿ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.