

ವಿಜಯವಾಣಿ ಸುದ್ದಿಜಾಲ ಧಾರವಾಡ
ಖಾಸಗಿ ಬಸ್‌ನಲ್ಲಿ ಸಂಚರಿಸುತ್ತಿದ್ದ ಮಹಿಳೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ. ಇಂದುಮತಿ ರಾಜಾರಾಮ ಕಾಂಬಳೆ (59) ಮೃತ ಮಹಿಳೆ. ಇವರು ಕರ್ನಾಟಕ ನೀರಾವರಿ ನಿಗಮದಲ್ಲಿ ಜವಾನರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಜ್ಯುಬಿಲಿ ವೃತ್ತದಲ್ಲಿ ಹುಬ್ಬಳ್ಳಿಗೆ ಹೋಗುತ್ತಿದ್ದ ಬಸ್‌ನಲ್ಲಿ ಸಂಚರಿಸುತ್ತಿದ್ದರು. ಟೋಲ್ ನಾಕಾ ಬಳಿ ಹೃದಯಾಘಾತ ಸಂಭವಿಸಿ ಕುಳಿತಿದ್ದ ಸೀಟಿನಲ್ಲಿ ಒರಗಿದ್ದರು. ನಿರ್ವಾಹಕ ಟಿಕೆಟ್ ಕೇಳಲು ಹೋದಾಗ ವಿಷಯ ಗೊತ್ತಾಗಿದೆ. ಕೂಡಲೇ ಮಹಿಳೆಯನ್ನು ಅದೇ ಬಸ್‌ನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟೊತ್ತಿಗೆ ಅವರ ಪ್ರಾಣ ಹೋಗಿತ್ತು.