ವಾಹನ ಅಪಘಾತ, ಮಹಿಳೆ ಮೃತ್ಯು

crime
Published on

ಸುಳ್ಯ: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪ ಕೊಡಪಾಲದಲ್ಲಿ ಟ್ಯಾಂಕರ್ ಲಾರಿ ಮತ್ತು ಕಾರು ಮಧ್ಯೆ ನಡೆದ ಅಪಘಾತದಲ್ಲಿ ಮಹಿಳೆಯೋರ್ವರು ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೊಡಗು ಸಿದ್ದಾಪುರ ನೆಲ್ಲಿಹುದಿಕೇರಿಯ ಶೋಭಾ(47) ಮೃತಪಟ್ಟವರು. ಕಾರಿನಲ್ಲಿದ್ದ ದೇವಯ್ಯ ಹಾಗೂ ವನಜಾಕ್ಷಿ ಗಾಯಗೊಂಡರು. ಮಡಿಕೇರಿ ಕಡೆಯಿಂದ ಸುಳ್ಯ ಭಾಗಕ್ಕೆ ಬರುತ್ತಿದ್ದ ಟ್ಯಾಂಕರ್ ಮತ್ತು ಸುಳ್ಯ ಭಾಗದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು ಮಧ್ಯೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net