

ಬಂಗಾರಪೇಟೆ: ಗಡಿ ಗ್ರಾಮದಲ್ಲಿ ಒಂಟಿ ಸಲಗ ದಾಳಿ ಮಾಡಿದ್ದು, ಮಂಗಳವಾರ ಸಾಕರಸನಹಳ್ಳಿಯ ಮಹಿಳೆಯನ್ನು ಬಲಿ ತೆಗೆದುಕೊಂಡಿದೆ.
ಸಾಕರಸನಹಳ್ಳಿಯ ಮಂಜುಳಾ (44) ಮೃತೆ.
ಕೂಲಿ ಕೆಲಸ ವಾಡಿ ಜೀವನ ಸಾಗಿಸುತ್ತಿದ್ದ ಮಂಜುಳಾ ತೋಟದ ಮನೆಯಲ್ಲಿ ವಾಸವಿದ್ದು, ಬೆಳಗಿನ ಜಾವ ಮೂತ್ರ ವಿಸರ್ಜನೆಗೆಂದು ಹೊರಬಂದಿದ್ದಾರೆ. ಮನೆಯ ಪಕ್ಕದಲ್ಲಿರುವ ಬಾಳೆಗಿಡಗಳನ್ನು ತಿನ್ನುತ್ತಿದ್ದ ಒಂಟಿ ಸಲಗ ಮಹಿಳೆಯ ಮೇಲೆ ಇದ್ದಕ್ಕಿದ್ದಂತೆ ದಾಳಿ ವಾಡಿದೆ. ದಾಳಿಯಿಂದ ತೀವ್ರ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ಮೂವರನ್ನು ಒಂಟಿ ಸಲಗ ಬಲಿ ಪಡೆದುಕೊಂಡಿದ್ದು, ಇದೂವರೆಗೂ ತಾಲೂಕಿನಲ್ಲಿ ಕಳೆದ 10 ವರ್ಷದಲ್ಲಿ ಸುವಾರು 16 ಮಂದಿ ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭೇಟಿ ನೀಡಿ ಮೃತ ಮಹಿಳೆ ಮಂಜುಳಾ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೆ ಪದೇಪದೆ ಈ ಭಾಗದಲ್ಲಿ ಆನೆ ದಾಳಿಗೆ ಪರಿಹಾರ ಕಂಡುಕೊಳ್ಳುವುದು ಸೇರಿ ಬಾಕಿ ಇರುವ ಸೋಲಾರ್ ೆನ್ಸಿಂಗ್ ಪೂರ್ಣಗೊಳಿಸುವ ವಾಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಆದಷ್ಟು ಬೇಗ ಯೋಜನೆ ಪೂರ್ಣ ಗೊಳಿಸುವ ಭರವಸೆ ನೀಡಿದ್ದಾರೆ.
ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ 15 ಲಕ್ಷ ರೂ. ಪರಿಹಾರ ವಿತರಣೆ ವಾಡಲಾಗುತ್ತದೆ. ತಳೂರು ಭಾಗದಲ್ಲಿ 3 ಕಿಮೀ ಸೋಲಾರ್ ಫೆನ್ಸಿಂಗ್ ಬಾಕಿ ಇದ್ದು, ಪೂರ್ಣಗೊಳಿಸಲು ಅರಣ್ಯ ಸಚಿವರ ಜತೆ ಈಗಾಗಲೇ ಶಾಸಕರು ವಾತನಾಡಿದ್ದು, ಟೆಂಡರ್ ಕಾರ್ಯ ಪೂರ್ಣಗೊಳಿಸಿ ವಾರ್ಚ್‌ನಲ್ಲಿ ಸೋಲಾರ್ ಅಳವಡಿಕೆ ವಾಡಲಾಗುತ್ತದೆ. ಇದರಿಂದ ಮುಂದೆ ಆನೆಗಳು ನಾಡಿನತ್ತ ನುಸಳಿವುದನ್ನು ನಿಯಂತ್ರಿಸಬಹುದು. ಶ್ರೀಲಕ್ಷ್ಮೀ ವಲಯ ಅರಣ್ಯಅಧಿಕಾರಿ, ಬಂಗಾರಪೇಟೆ