

ದೊಡ್ಡಬಳ್ಳಾಪುರ : ನಗರದ ಮನೆಯ ಮುಂದಿನ ಗಿಡದಿಂದ ಹೂವು ಬಿಡಿಸುತ್ತಿದ್ದ ಮಹಿಳೆಗೆ ಗುರುವಾರ ಬೆಳಗ್ಗೆ ಕಾರು ಡಿಕ್ಕಿಯಾಗಿ ಆಕೆೆ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ತೀವ್ರ ಗಾಯಗೊಂಡಿದ್ದಾರೆ. ಗೊಲ್ಲಹಳ್ಳಿ ನಿವಾಸಿ ನಾಗರತ್ನಮ್ಮ (48)ಮೃತೆ. ನಾಗರತ್ನಾ (38) ಗಾಯಗೊಂಡವರು.
ಯಲಹಂಕ- ಹಿಂದೂಪುರ ಹೆದ್ದಾರಿಯಲ್ಲಿನ ಮನೆ ಮುಂದೆಯೇ ಅವಘಡ ಸಂಭವಿಸಿದ್ದು, ಕಾರು ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ನಾಗರತ್ನಮ್ಮಮೃತಪಟ್ಟಿದ್ದಾರೆ. ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿದ್ದ ಮನೆಗೆ ನುಗ್ಗಿದೆ. ಕಾರು ಬಿಟ್ಟು ಚಾಲಕ ಮತ್ತು ಆತನ ಜತೆಯಲ್ಲಿದ್ದ ಪ್ರಯಾಣಿಕರು ಪರಾರಿಯಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.