

ಬೆಟ್ಟದಪುರ: ತಾಲೂಕಿನ ಬೆಟ್ಟದಪುರ ಸಮೀಪದ ದೊಡ್ಡನೇರಳೆ ಗ್ರಾಮದಲ್ಲಿ ಮಂಗಳವಾರ ವಿದ್ಯುತ್ ಶಾಕ್‌ನಿಂದ ಮಹಿಳೆ ಮೃತಪಟ್ಟಿದ್ದಾರೆ.
ದೊಡ್ಡನೇರಳೆ ಗ್ರಾಮದ ನಿವಾಸಿ ರವಿ ಅವರ ಪತ್ನಿ ಭಾರತಿ (36) ಮೃತರು. ಇವರಿಗೆ ಇಬ್ಬರು ಪುತ್ರರು ಇದ್ದಾರೆ. ಭಾರತಿ ಅವರು ಎಂದಿನಂತೆ ಮನೆಯಲ್ಲಿದ್ದಾಗ ನೀರೆತ್ತುವ ಸಂಪ್‌ಗೆ ಸ್ವಿಚ್ ಆನ್ ಮಾಡಲು ಹೋದಾಗ ವಿದ್ಯುತ್ ಶಾಕ್ ಹೊಡೆದಿದೆ. ಕೂಡಲೇ ನೆರೆಹೊರೆಯವರು ಕೂಗಿಕೊಂಡಿದ್ದನ್ನು ಗಮನಿಸಿ ಬೆಟ್ಟದಪುರ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಈ ಸಂಬಂಧ ಮೃತರ ತಾಯಿ ಮಹದೇವಮ್ಮ ಪಿರಿಯಾಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಬುಧವಾರ ವಾರಸುದಾರರಿಗೆ ಒಪ್ಪಿಸಲಾಗಿದೆ.