ನಾಲೆಗೆ ಟ್ರಾೃಕ್ಟರ್ ಉರುಳಿ ಮಹಿಳೆ ಸಾವು

kavital accident
ಹಾಲಾಪುರದ 74 ಉಪನಾಲೆಯಲ್ಲಿ ಬಿದ್ದಿರುವ ಟ್ರಾೃಕ್ಟರ್.
Published on

ಕವಿತಾಳ: ಕೃಷಿ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಾೃಕ್ಟರ್ ಬುಧವಾರ ಹಾಲಾಪುರ ಗ್ರಾಮದ ಬಳಿ 74 ಉಪನಾಲೆಗೆ ಉರುಳಿದ್ದರಿಂದ ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದು, ಏಳು ಜನರು ಗಾಯಗೊಂಡಿದ್ದಾರೆ.

ಹಾಲಾಪುರದ ಅಂಬಮ್ಮ ರಂಗಪ್ಪ ನಾಯಕ ಪಾಮನಕಲ್ಲೂರು ಮೃತೆ. ಸಣ್ಣಪುಟ್ಟ ಗಾಯವಾದ ಕೆಲವರನ್ನು ಸ್ಥಳೀಯ ಆಸ್ಪತ್ರೆ ಹಾಗೂ ಐವರಲ್ಲಿ ಮೂವರನ್ನು ಮಸ್ಕಿ, ಇಬ್ಬರು ಮಹಿಳೆಯರನ್ನು ರಾಯಚೂರು ಆಸ್ಪತ್ರೆಗೆ ಸೇರಿಸಲಾಗಿದೆ.

ಕಾಲುವೆ ಬಳಿ ಮುಂದಿನ ವಾಹನವನ್ನು ಹಿಂದಿಕ್ಕಿ ಅವಸರವಾಗಿ ಹೋಗುವಾಗ ಟ್ರಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನಾಲೆಯಲ್ಲಿ ಹೆಚ್ಚು ನೀರಿಲ್ಲದ ಕಾರಣ ಹೆಚ್ಚಿನ ಜೀವಹಾನಿ ತಪ್ಪಿದೆ. ಚಾಲಕನ ನಿರ್ಲಕ್ಷೃವೇ ಕಾರಣ ಎನ್ನಲಾಗಿದೆ. ಈ ಕುರಿತು ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net