ಕಾರು ಸ್ಟಾರ್ಟ್​ ಮಾಡಿದ ಮಹಿಳೆಗೆ ಕಾದಿದ್ದ ಜವರಾಯ: ಕಾರಿನ ಬಾಗಿಲು, ಮರದ ನಡುವೆ ಸಿಲುಕಿ ದುರಂತ ಸಾವು!

Woman Death
Published on

ಬೆಂಗಳೂರು: ಕಾರು ಸ್ಟಾರ್ಟ್​ ಮಾಡುವ ಮುನ್ನ ಒಮ್ಮೆ ಗೇರ್​ ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಇಲ್ಲವಾದರೆ ಏನೆಲ್ಲಾ ಸಂಭವಿಸಬಹುದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆ ಈ ಒಂದು ಘಟನೆ ಉದಾಹರಣೆಯಾಗಿದೆ.

ರಿವರ್ಸ್​ ಗೇರ್​ನಲ್ಲಿರುವುದನ್ನು ಗಮನಿಸದೇ ಕಾರು ಸ್ಟಾರ್ಟ್​ ಮಾಡಿದ ಬಳಿಕ ಸಂಭವಿಸಿದ ಅನಾಹುತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈ ಘಟನೆ ಬುಧವಾರ ಮಧ್ಯಾಹ್ನ 2:50ರ ಸುಮಾರಿಗೆ ನ್ಯೂ ಬಿಇಎಲ್ ರಸ್ತೆಯ ಆರ್ ಕೆ ಗಾರ್ಡನ್ 4ನೇ ಕ್ರಾಸಿನಲ್ಲಿ ನಡೆದಿದೆ. ಮೃತರನ್ನು ನಂದಿನಿ ರಾವ್ (45) ಎಂದು ಗುರುತಿಸಲಾಗಿದೆ.

ರಿವರ್ಸ್ ಗೇರ್​ನಲ್ಲಿರುವುದನ್ನು ಗಮನಿಸದ ನಂದಿನಿ, ಅಜಾಗರೂಕತೆಯಿಂದ ತಮ್ಮ ಕಾರಿನ ಬಾಗಿಲ ಹೊರಗಡೆ ನಿಂತುಕೊಂಡೆ ಕಾರು ಸ್ಟಾರ್ಟ್ ಮಾಡಿದ್ದಾರೆ. ಮೊದಲೇ ರಿವರ್ಸ್​ ಗೇರ್​ನಲ್ಲಿದ್ದರಿಂದ ವಾಹನ ಹಿಂದಕ್ಕೆ ಚಲಿಸಿದೆ. ಈ ವೇಳೆ ಕಾರಿನ ಬಾಗಿಲು ಮತ್ತು ಪಕ್ಕದ ಮರದ ನಡುವೆ ಸಿಕ್ಕಿ ನಂದಿನಿ ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣ ನಂದಿನಿ ಅವರನ್ನು ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಪರೀಕ್ಷಿಸುವಷ್ಟರಲ್ಲಿ ನಂದಿನಿ ಉಸಿರು ನಿಂತು ಹೋಗಿತ್ತು. ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net