ಶೇಂಗಾ ಮಷಿನ್‌ಗೆ ಬಿದ್ದು ಮಹಿಳೆ ದುರ್ಮರಣ

VV DIGITAL
Published on

ಶಿರಹಟ್ಟಿ: ಶೇಂಗಾ ಮಷಿನ್‌ನಲ್ಲಿ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟ ದಾರುಣ ಘಟನೆ ತಾಲೂಕಿನ ಜಲ್ಲಿಗೇರಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಗೀತಾ ಬಸಪ್ಪ ಬಸಾಪುರ (30) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಬೆಳಗ್ಗೆ ಎಂದಿನಂತೆ ಶೇಂಗಾ ಬಳ್ಳಿಗಳನ್ನು ಮಷಿನ್‌ನಲ್ಲಿ ಸುರಿಯುವಾಗ ಅವರು ಆಯತಪ್ಪಿ ಯಂತ್ರದಲ್ಲಿ ಬದ್ದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ನೀಡುವ ಮುನ್ನವೇ ಅವರು ಅಸುನೀಗಿದ್ದಾರೆ. ಸ್ಥಳೀಯರಲ್ಲಿ ಈ ದುರ್ಘಟನೆ ಆಘಾತ ಉಂಟು ಮಾಡಿದೆ. ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net