ಬೈಕ್‌ನಿಂದ ಬಿದ್ದು ಮಹಿಳೆ ಸಾವು

Bike Accident_2
Published on

ಗೋಕರ್ಣ: ಬೈಕ್‌ನಿಂದ ಬಿದ್ದು ಮಹಿಳೆ ಸಾವಿಗೀಡಾದ ಘಟನೆ ಇಲ್ಲಿನ ಭದ್ರಕಾಳಿ ಕಾಲೇಜ್ ಎದುರಿನ ಮುಖ್ಯ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದ ಹಳೆಕೇರಿಯ ಸುಮಂಗಲಾ ಕೃಷ್ಣ ಹೆಗಡೆ(61) ಮೃತರು. ಅವರು ಪತಿ ಕೃಷ್ಣ ವಿಷ್ಣು ಹೆಗಡೆ ಚಲಾಯಿಸುತ್ತಿದ್ದ ಬೈಕ್‌ನ ಹಿಂಬದಿ ಕುಳಿತು ಗೋಕರ್ಣಕ್ಕೆ ಬರುತ್ತಿರುವಾಗ ಬೈಕ್ ನಿಯಂತ್ರಣ ಕಳೆದುಕೊಂಡ ಕಾರಣ ಸುಮಂಗಲಾ ಕೆಳಗೆ ಬಿದ್ದು ತಲೆ ಮತ್ತು ಮುಖಕ್ಕೆ ಗಾಯಗಳಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net