

ಕಡಬ: ಸಾಲ ತೀರಿಸಲಾಗದೆ ಮನನೊಂದು ವಿಷ ಸೇವಿಸಿದ್ದ ಆಲಂಕಾರು ಗ್ರಾಮದ ನೆಕ್ಕಿಲಾಡಿ ನಿವಾಸಿ ಚಂದ್ರಾವತಿ(75) ಎಂಬುವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಚಂದ್ರಾವತಿ ಅವರು ಮೂರು ವರ್ಷದ ಹಿಂದೆ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಸಾಲ ತೀರಿಸಲಾಗದೆ ಮಾನಸಿಕವಾಗಿ ನೊಂದಿದ್ದರು. ಪುತ್ರ ಗಂಗಾಧರ ಗೌಡ ಮನೆಗೆ ಬಂದಾಗ ಚಂದ್ರಾವತಿ ಅಂಗಳದಲ್ಲಿ ಅಸ್ವಸ್ಥರಾಗಿ ಬಿದ್ದಿದ್ದರು. ಉಪಚರಿಸಿದಾಗ ವಿಷ ಸೇವಿಸಿರುವುದು ಕಂಡು ಬಂದಿತ್ತು. ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾದೆ ಆ.31ರಂದು ಮೃತಪಟ್ಟಿದ್ದಾರೆ. ಪುತ್ರಿ ಇಂದಿರಾ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.