ತೆಂಗಿನ ಮರದಿಂದ ಬಿದ್ದ ಮಹಿಳೆ ಸಾವು!

1 t
Published on

ಸವಣೂರು: ತೆಂಗಿನಕಾಯಿ ಕೀಳುವ ಕೆಲಸದಲ್ಲಿ ಪರಿಣಿತಿ ಹೊಂದಿದ್ದ ಮಹಿಳೆಯೊಬ್ಬರು, ಕೆಲಸದ ಸಮಯ ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ಕಡಬ ತಾಲೂಕಿನ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದಲ್ಲಿ ನಡೆದಿದೆ.

ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದ ಪ್ರಮೋದ್ ಬೊಳ್ಳಾಜೆ ಅವರ ಪತ್ನಿ ಸುಚಿತ್ರ (30) ಮೃತ ಮಹಿಳೆಯಾಗಿದ್ದಾರೆ. ಮರ ಹತ್ತುವುದು ಪುರುಷರ ಕೆಲಸ ಎಂದು ಭಾವಿಸಲಾಗಿದ್ದ ಸಮಯದಲ್ಲಿ ಇವರು ತೆಂಗಿನ ಮರ ಏರುವ ಮೂಲಕ ಪ್ರಸಿದ್ದಿ ಪಡೆದಿದ್ದರು. ಸುಚಿತ್ರ ರವರ ಈ ಸಾಧನೆಯನ್ನು ಮೆಚ್ಚಿ ಹಲವು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net