

ಮುಳಬಾಗಿಲು: ನಗರದ ಹೊರವಲಯದ ರಾ.ಹೆ&75ರ ಬೈಪಾಸ್ ಬ್ರಿಡ್ಜ್ ಮೇಲೆ ಮಂಗಳವಾರ ಬೆಳಗ್ಗೆ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಅಪರಿಚಿತ ವಾಹನ ಡಿಕ್ಕಿಯಾಗಿ ಪತಿ ಮೃತಪಟ್ಟಿದ್ದು, ಪತಿಗೆ ಗಂಭೀರ ಗಾಯಗಳಾಗಿವೆ.
ತಾಲೂಕಿನ ತೊಂಡಹಳ್ಳಿಯ ಕುಸುಮಾ (28) ಮೃತೆ. ಇವರ ಪತಿಭಾಸ್ಕರ್ರೆಡ್ಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಕ್ಕಿ ಹೊಡೆತಕ್ಕೆ ಕುಸುಮಾ ಅವರು ಬ್ರಿಡ್ಜ್ ಮೇಲಿಂದ ಕೆಳಕ್ಕೆ ಬಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.