ಕಾರು ಡಿಕ್ಕಿ ಹೊಡೆದು ಮಹಿಳೆ ಸಾವು

12 mlv 1 ಸುಮಿತ್ರಾ (52)
Published on

ಮಳವಳ್ಳಿ: ಪಟ್ಟಣದ ಶಾಂತಿ ಕಾಲೇಜು ಬಳಿ ಮೈಸೂರು ಮುಖ್ಯರಸ್ತೆಯಲ್ಲಿ ಸೋಮವಾರ ಕಾರು ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದ ಪಾದಚಾರಿ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಪಟ್ಟಣದ ಹಳೇ ಕೋರ್ಟ್ ಹಿಂಭಾಗದ ಬಡಾವಣೆಯ ನಿವಾಸಿ ಶಿವಲಿಂಗೇಗೌಡ ಅವರ ಪತ್ನಿ ಸುಮಿತ್ರಾ(52) ಮೃತರು. ಸಂಜೆ 6.30ರ ಸಮಯದಲ್ಲಿ ವಾಕಿಂಗ್‌ಗೆ ತೆರಳಿದ್ದಾಗ ಮೈಸೂರು ರಸ್ತೆಯ ಶಾಂತಿ ಕಾಲೇಜು ಬಳಿ ಪಟ್ಟಣದ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ ಪೆಟ್ಟು ಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಆಸ್ಪತ್ರೆಗೆ ಸಾಗಿಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮಂಗಳವಾರ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಯಿತು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net