

ಸಿಂಧನೂರು: ನಗರದ ಗಂಗಾವತಿ ರಸ್ತೆ ಮಾರ್ಗದ ಸಿಂಡಿಕೇಟ್ ಬ್ಯಾಂಕ್ ಬಳಿ ಶುಕ್ರವಾರ ಬೈಕ್‌ಗೆ ಲಾರಿ ತಾಗಿದ್ದರಿಂದ ಮಹಿಳೆ ಸಾವಿಗೀಡಾಗಿದ್ದಾರೆ.
ಕೊಳಬಾಳ ಗ್ರಾಮದ ಬಾಗಮ್ಮ ನಾಗಪ್ಪ(50) ಮೃತೆ. ಗ್ರಾಮದಿಂದ ಅಮರಾಪುರಕ್ಕೆ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಅಳಿಯ ಮಹೇಶ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂದಿನ ಬಂದ ಮಹಾರಾಷ್ಟ್ರ ಮೂಲದ ಲಾರಿ ತಾಗಿದ್ದು, ಕೆಳಗೆ ಬಿದ್ದ ಬಾಗಮ್ಮ ಮೇಲೆ ಲಾರಿ ಚಕ್ರಗಳು ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಬಿ.ಎಸ್.ತಳವಾರ ಭೇಟಿ ನೀಡಿ, ಪರಿಶೀಲಿಸಿದ್ದು, ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಛಿದ್ರ, ವ್ಯಕ್ತಿ ಪಾರು: ನಗರದ ಕುಷ್ಟಗಿ ರಸ್ತೆ ಮಾರ್ಗದಲ್ಲಿ ಮಲ್ಲದಗುಡ್ಡ ಗ್ರಾಮದ ವ್ಯಕ್ತಿಯ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವಾಹನ ಛಿದ್ರಗೊಂಡಿದ್ದು, ಅದೃಷ್ಟವಶಾತ್ ರಸ್ತೆ ಪಕ್ಕಕ್ಕೆ ಬಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.