

ಮಂಡ್ಯ: ಮಂಡ್ಯ-ಹನಕೆರೆ ಮಾರ್ಗ ಮಧ್ಯೆ ಸೆ.25ರಂದು ರೈಲಿಗೆ ಸಿಲುಕಿ ಅಪರಿಚಿತ ಮಹಿಳೆ ಮೃತಪಟ್ಟಿದ್ದಾರೆ.
ಸುಮಾರು 45 ರಿಂದ 50 ವರ್ಷದವರಾಗಿದ್ದು, ಐದು ಅಡಿ ಎತ್ತರವಿದ್ದಾರೆ. ಎಡಗೈ ಮೇಲೆ ಹತ್ತು ಇಂಚು ಹಳೆ ಗಾಯದ ಗುರುತಿದೆ. ಶವವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದೆ. ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.