

ಕಾಸರಗೋಡು: ಮನೆ ಸನಿಹದ ಸ್ನಾನಗೃಹದಲ್ಲಿ ವಿಷಪೂರಿತ ಹಾವಿನ ಕಡಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಣ್ಮಕಜೆ ಪಂಚಾಯಿತಿಯ ಕಾಟುಕುಕ್ಕೆ ಬಾಳೆಮೂಲೆ ಚಾಕಟೆ ನಿವಾಸಿ ಅಮ್ಮಕ್ಕು(65)ಮೃತಪಟ್ಟಿದ್ದಾರೆ.
ಮೂರು ವಾರ ಹಿಂದೆ ಅಮ್ಮಕ್ಕು ಅವರಿಗೆ ಹಾವು ಕಡಿದಿತ್ತು. ತಕ್ಷಣ ಅವರನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಂತರ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಜೀವ ಉಳಿಸಲಾಗಲಿಲ್ಲ.