

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಲಾಳನಕೆರೆ-ಪೀಹಳ್ಳಿ ಸಮೀಪ ಭಾನುವಾರ ಮುಂಜಾನೆ ಜಮೀನಿಗೆ ತೆರಳಿದ್ದ ಮಹಿಳೆ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದು, ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಲಾಳನಕೆರೆ ಗ್ರಾಮದ ಸಾಕಮ್ಮ ಮೃತ ಮಹಿಳೆ. ಎಂದಿನಂತೆ ಜಮೀನಿಗೆ ತೆರಳಿದ ವೇಳೆ ದುರಂತ ಸಂಭವಿಸಿದ್ದು, ಘಟನೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ತೆರಳಿದ್ದಾರೆ.