ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ: ಮಗಳ ಸಾವಿಗೆ ಆಕೆಯ ಗಂಡನೇ ಕಾರಣ...

sucide case
Published on

ಬೆಂಗಳೂರು: ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೃಹಿಣಿಯೊಬ್ಬರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ರಂಜಿತ್ ಎಂಬಾತನ ಪತ್ನಿ ಉಷಾ ಮೃತದುರ್ದೈವಿ. 2015ರಲ್ಲಿ ರಂಜಿತ್ ಜತೆ ಉಷಾಗೆ ಮದುವೆ ಆಗಿತ್ತು. ಇದೀಗ ಗಂಡನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಉಷಾ ಶವ ಪತ್ತೆಯಾಗಿದೆ. ಇದನ್ನೂ ಓದಿರಿ ನಿವೃತ್ತ ಉಪನ್ಯಾಸನ ಪತ್ನಿ, ಇಬ್ಬರು ಮಕ್ಕಳು ನಾಲೆಗೆ ಹಾರಿ ಆತ್ಮಹತ್ಯೆ! ಸಾವಿಗೂ ಮುನ್ನ ನಡೆದಿತ್ತು ವಾಕ್ಸಮರ

ಕಿರುಕುಳ ನೀಡಿ ನನ್ನ ಮಗಳನ್ನ ಆಕೆಯ ಗಂಡ ಕೊಂದಿದ್ದಾನೆ ಎಂದು ಉಷಾಳ ತವರು ಮನೆಯವರು ಆರೋಪಿಸಿದ್ದಾರೆ. ವರದಕ್ಷಿಣೆ ಕಿರುಕುಳಕ್ಕೆ ಅತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವರ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ರಂಜಿತ್​ ಮನೆಯಲ್ಲಿ ಆ ದಿನ ಏನಾಯ್ತು? ಉಷಾಳ ಸಾವಿಗೆ ಕಾರಣ ಏನು? ಎಂಬುದು ತನಿಖೆ ನಂತರ ಬಯಲಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net