ನೇಣುಬಿಗಿದು ಮಹಿಳೆ ಆತ್ಮಹತ್ಯೆ

hanging
Published on

ಮಂಗಳೂರು: ಬಾವುಟಗುಡ್ಡೆಯ ನಿರ್ಮಿತಿ ಕೇಂದ್ರದ ಕಟ್ಟಡವೊಂದರಲ್ಲಿ ಮಹಿಳೆಯೊಬ್ಬರು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಬಿಹಾರ, ಪ್ರಸ್ತುತ ಬಾವುಟಗುಡ್ಡೆ ನಿವಾಸಿ ರೀಟಾ ದೇವಿ(52) ಆತ್ಮಹತ್ಯೆಗೈದವರು. ಮೃತ ಮಹಿಳೆಯ ಪತಿ ಈ ಹಿಂದೆ ಕೆಲಸ ಮಾಡುವಾಗ ಬಿದ್ದಿದ್ದು, ಅವರ ಬಲ ಬದಿಯ ಎದೆಗೆ ಏಟಾಗಿದೆ. ಇದರಿಂದ ಕೆಲಸ ಮಾಡಲು ಅವರಿಗೆ ಕಷ್ಟವಾಗುತ್ತಿದ್ದು, ಪತ್ನಿ ಬಳಿ ಊರಿಗೆ ಹೋಗೋಣ, ಅಲ್ಲಿ ಏನಾದರೂ ಕೆಲಸ ಮಾಡೋಣ ಹೇಳಿದ್ದರು. ಇದಕ್ಕೆ ರೀಟಾ ದೇವಿ ವಿರೋಧ ವ್ಯಕ್ತಪಡಿಸುತ್ತಿದ್ದರು. ಸೋಮವಾರ ಊರಿಗೆ ಹೋಗುವ ಎಂದು ಹೇಳಿದಾಗ ರೀಟಾ ದೇವಿ ಒಪ್ಪಲಿಲ್ಲ. ನಂತರ ಬೆಳಗ್ಗೆ 9.30ರಿಂದ 10.30ರ ವೇಳೆ ಮಹಿಳೆ ನಾಪತ್ತೆಯಾಗಿದ್ದು, ಹುಡುಕಾಡಿದಾಗ ನೆಲ ಮಹಡಿಯಲ್ಲಿರುವ ಟಾಯ್ಲೆಟ್‌ನ ಕಾಂಕ್ರೀಟ್ ಬೀಮ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net