ಪಿಜಿಯಲ್ಲಿ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Doddapete police station
ಶಿವಮೊಗ್ಗ ದೊಡ್ಡಪೇಟೆ ಠಾಣೆ
Published on

ಶಿವಮೊಗ್ಗ: ನಗರದ ಮಿಷನ್ ಕಂಪೌಂಡ್ ಬಳಿಕ ಮಹಿಳಾ ಪಿಜಿ(ಪೇಯಿಂಗ್ ಗೆಸ್ಟ್)ಯಲ್ಲಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಾಲೂಕಿನ ಸೂಗೂರಿನ ಮಾಲಾ (26) ಮೃತ ಮಹಿಳೆ. ಭದ್ರಾವತಿಯ ವ್ಯಕ್ತಿ ಜತೆ ಮದುವೆಯಾಗಿತ್ತು. ಆನಂತರ ಹಲವು ದಿನಗಳಿಂದ ಶಿವಮೊಗ್ಗದಲ್ಲಿ ಪಿಜಿಯಲ್ಲಿ ವಾಸವಾಗಿದ್ದಳು. ಊಟಕ್ಕೆ ಬಾರದೇ ಇದ್ದಾಗ ಮಾಲೀಕರು ಹೋಗಿ ನೋಡಿದ್ದು ಕೊಠಡಿಯಲ್ಲಿ ಟವೆಲ್‌ನಿಂದ ನೇಣು ಬಿಗಿದುಕೊಂಡಿದ್ದಳು. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net