ಮನೆ ಕಟ್ಟಲು ಮಾಡಿದ ಸಾಲ ತೀರಿಸಲಾಗದೆ ಮಹಿಳೆ ಆತ್ಮಹತ್ಯೆ

lady Suside+1
Published on

ಸವಣೂರ: ಮನೆ ಕಟ್ಟುವ ಸಲುವಾಗಿ ಮಾಡಿದ ಸಾಲ ತೀರಿಸಲಾಗದೆ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಲಕೋಟಿ ಗ್ರಾಮದಲ್ಲಿ ನಡೆದಿದೆ.

ದ್ಯಾಮವ್ವ ಗೂಳಪ್ಪ ತಿಮ್ಮಾಪುರ (45) ಮೃತ ಮಹಿಳೆ.

ಇವರು ಮನೆ ಕಟ್ಟುವ ಸಲುವಾಗಿ ವಿವಿಧ ಸಂಘ ಹಾಗೂ ಬ್ಯಾಂಕ್​ನಲ್ಲಿ 10 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಆದರೆ, ಸಾಲದ ಕಂತು ತುಂಬಲಾಗದೆ ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಸವಣೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net