

ಹುಬ್ಬಳ್ಳಿ: ನಗರದ ಮಹಿಳೆಯೊಬ್ಬರಿಗೆ ಖದೀಮರು ಹುಡಾದಲ್ಲಿ ಕಡಿಮೆ ಬೆಲೆಗೆ ಪ್ಲಾಟ್ ಕೊಡಿಸುವುದಾಗಿ ನಂಬಿಸಿ, ಆನ್‌ಲೈನ್ ಮೂಲಕ 7.66 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಕೇಶ್ವಾಪುರ ನಾಗಶೆಟ್ಟಿಕೊಪ್ಪದ ಶಿವಾನಿ ಅವರ ಮೊಬೈಲ್ ಫೋನ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬನು ಹು- ಧಾದಲ್ಲಿ ಪ್ಲಾಟ್ ಬೇಕಿದ್ದರೆ ತಿಳಿಸಿ, ಹುಡಾದಲ್ಲಿ ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸಿಇಎನ್ ಕೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.