ಬಸ್​ ಹತ್ತುತ್ತಿದ್ದಾಗ ಚಿನ್ನಾಭರಣ ದೋಚಿದ ಖದೀಮರು

Thief
Published on

ಹಾವೇರಿ: ಬಸ್​ ಹತ್ತುವಾಗ ಮಹಿಳೆಯ ವೇನೆಟಿ ಬ್ಯಾಗ್​ನಲ್ಲಿದ್ದ 2.45 ಲಕ್ಷ ರೂ. ಮೌಲ್ಯದ 49 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿದ ಟನೆ ನಗರದ ಸಾರಿಗೆ ಸಂಸ್ಥೆ ಬಸ್​ ನಿಲ್ದಾಣದಲ್ಲಿ ಬುಧವಾರ ನಡೆದಿದೆ.

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹ್ಯಾರಡ ಗ್ರಾಮದ ಮಾಚಿಹಳ್ಳಿ ಭಾರತಿ ವೇಣುಗೋಪಾಲ (38) ಎಂಬುವರ ಚಿನ್ನಾಭರಣ ದೋಚಿರುವುದು.

ಇವರು ನಗರದ ಬಸ್​ ನಿಲ್ದಾಣದಲ್ಲಿ ಹಾವೇರಿ&ಲೆ$್ಮಶ್ವ ಬಸ್​ ನಿಲ್ಲುವ ಜಾಗದಲ್ಲಿ ಬಸ್​ ಹತ್ತುತ್ತಿದ್ದಾಗ ಯಾರೋ ಕಳ್ಳರು ಗಮನ ಬೇರೆಡೆ ಸೆಳೆದು ವೇನೆಟಿ ಬ್ಯಾಗ್​ನಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net