

ಹೊನ್ನಾವರ: ತಾಲೂಕಿನ ಮುಗ್ವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಗರೆ ಗ್ರಾಮದ ಹೊಸಹಿತ್ಲು ಸುತ್ತಮುತ್ತ ಓಡಾಡಿಕೊಂಡಿರುವ ಗೂಳಿಯೊಂದು ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದು, ಜನರು ಭಯದಿಂದ ಓಡಾಡುವ ಪರಿಸ್ಥಿತಿ ನಿರ್ವಣವಾಗಿದೆ.
ನಗರೆಯಲ್ಲಿ ಮಹಿಳೆ ಮೇಲೆ ಗೂಳಿ ಮಾಡಿದ ದಾಳಿಗೆ ಕಾಲಿನ ಮೂಳೆ ಮುರಿದು ಗಂಭೀರ ಪೆಟ್ಟಾಗಿದೆ. ಈ ಹಿಂದೆ ಹಲವು ಜನರ ಮೇಲೆ ದಾಳಿಗೆ ಪ್ರಯತ್ನ ಪಟ್ಟು ಅಟ್ಟಿಸಿಕೊಂಡು ಹೋಗಿದೆ. ಬೇರೆ ಬೇರೆ ಕಡೆ ಓಡಾಡುತ್ತಿರುವುದರಿಂದ ಚಿಕ್ಕಮಕ್ಕಳು, ಸಾರ್ವಜನಿಕರು ಭಯದಿಂದಲೆ ಓಡಾಡುವಂತಾಗಿದೆ. ಗ್ರಾಮ ಪಂಚಾಯಿತಿಯವರು ಈ ಬಗ್ಗೆ ಗಮನ ಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.