ಚಿನ್ನ, ಬೆಳ್ಳಿ ಕಳವು ಮಾಡಿದ ಮಹಿಳೆ ಬಂಧನ

Untitled-1
ಬಂಗಾರಪೇಟೆ ಲಕ್ಷಿ$್ಮದೇವಮ್ಮ ಮನೆಯಲ್ಲಿ ಕಳವು ಮಾಡಿದ್ದ ಚಿನ್ನ, ಬೆಳ್ಳಿ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದು.
Published on

ಬಂಗಾರಪೇಟೆ: ಬಂಗಾರ ಮತ್ತು ಬೆಳ್ಳಿ ಆಭರಣಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಅಮರಾವತಿ ಬಡಾವಣೆಯ ಮಹಿಳೆಯೊಬ್ಬರನ್ನು ಬಂಧಿಸಿದ ಬಂಗಾರಪೇಟೆ ಪೊಲೀಸರು 43 ಗ್ರಾಂ ಚಿನ್ನ ಮತ್ತು 1 ಕೆಜಿ 454 ಗ್ರಾಂ ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ. ಪಟ್ಟಣದ ನಿವಾಸಿ ರುಕ್ಕಮ್ಮ ಬಂಧಿತೆ. ಕಳೆದ ತಿಂಗಳು ಪಟ್ಟಣದ ಲಕ್ಷ್ಮೀದೇವಮ್ಮ ಎಂಬುವವರು ಮನೆಗೆ ಬೀಗ ಹಾಕಿ ಊರಿಗೆ ಹೋಗಿದ್ದಾಗ, ಆರೋಪಿ ನಕಲಿ ಕೀ ಉಪಯೋಗಿಸಿ ಮನೆಯೊಳಗೆ ನುಗ್ಗಿ ಚಿನ್ನ ಮತ್ತು ಬೆಳ್ಳಿ ಕಳವು ಮಾಡಿದ್ದರು. ಏ.28ರಂದು ಮನೆ ಮಾಲಕಿ ಬಂದಾಗ ಕೃತ್ಯ ಬೆಳಕಿಗೆ ಬಂದಿತ್ತು. ಈ ಕುರಿತು ಬಂಗಾರಪೇಟೆ ಠಾಣೆಯಲ್ಲಿ ಅಂದೇ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಪತ್ತೆ ಮಾಡಲು ಡಿವೈಎಸ್ಪಿ ಎಸ್​.ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ ಪಿಐ ಆರ್​. ದಯಾನಂದ್​ ನೇತೃತ್ವದಲ್ಲಿ ಪಿಎಸ್​ಐ ಪ್ರಕಾಶ್​ ನರಸಿಂಗ್​ ಮತ್ತು ಅವರ ತಂಡ ರುಕ್ಕಮ್ಮ ಎಂಬುವರನ್ನು ಬಂಧಿಸಿ, 43 ಗ್ರಾಂ ಚಿನ್ನ, 1 ಕೆಜಿ 454 ಗ್ರಾಂ ಬೆಳ್ಳಿ ವಶಪಡಿಸಿಕೊಂಡು ಮಾಲೀಕರಿಗೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಬಂಗಾರಪೇಟೆ ಪಿಎಸ್​ಐ ಪ್ರಕಾಶ್​ ನರಸಿಂಗ್​, ಸಿಬ್ಬಂದಿ ನಾಗೇಶ್​, ಚಲಪತಿ, ಮಧುಕುಮಾರ್​, ಸುನೀಲ್​ ಮತ್ತು ಮುನೇಂದ್ರ ಅವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಪ್ರಶಂಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net