

ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಮದ್ಯ ಮಾರುತ್ತಿದ್ದ ಮಹಿಳೆಯನ್ನು ಸೋಮವಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ಮಂಗಳಮ್ಮ(60) ಬಂಧಿತ ಮಹಿಳೆ. ಈಕೆ ಸಾರ್ವಜನಿಕರಿಗೆ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲು ಮುಂದಾಗಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರೀತ್‌ದಾಳಿ ನಡೆಸಿ ಮಾಲು ಸಮೇತ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತೆಯಿಂದ 90 ಎಂಎಲ್ ಸಾಮರ್ಥ್ಯದ 70 ಪೌಚ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಠಾಣಾ ಜಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ದಾಳಿಯಲ್ಲಿ ಎಎಸ್‌ಐ ಮಧು, ಹೆಡ್‌ಕಾನ್‌ಸ್ಟೆಬಲ್ ರಾಚಪ್ಪ, ಗುರುಪ್ರಸಾದ್, ವಿಜಯಲಕ್ಷ್ಮೀ ಇದ್ದರು.