

ಹಾವೇರಿ: ಲೋನ್ ಕೊಡುವುದಾಗಿ ನಂಬಿಸಿ ಹೊಸದಾಗಿ ಬ್ಯಾಂಕ್ ಖಾತೆ ತೆರೆದು ಅದರ ಮೂಲಕ ಆನ್ಲೈನ್ನಲ್ಲಿ ವಂಚಿಸಿದ 1.74 ಕೋಟಿ ರೂ. ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುವ ಮೂಲಕ ಮಹಿಳೆಯೊಬ್ಬರ ಬ್ಯಾಂಕ್ ಖಾತೆ ದುರುಪಯೋಗ ಪಡಿಸಿಕೊಂಡ ಕುರಿತು ಇಲ್ಲಿಯ ಸೈಬರ್ ಕೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿಯ ಮಹಿಳೆಯೊಬ್ಬರಿಗೆ ಕರೆ ಮಾಡಿದ ನೇಹಾ ಮತ್ತು ಅಮಿತ್ ಎಂಬ ಅಪರಿಚಿತರು, ಲೋನ್ ಮಾಡಿಕೊಡುವುದಾಗಿ ನಂಬಿಸಿ ಬ್ಯಾಂಕ್ವೊಂದರಲ್ಲಿ ಹೊಸದಾಗಿ ಖಾತೆ ತೆರೆಯಿಸಿದ್ದಾರೆ. ನಂತರ ಅವರ ಫೋನ್ಗೆ ಪುಶ್ಬುಲೆಟ್ ಆ್ಯಪ್ಅನ್ನು ಇನ್ಸ್ಟಾಲ್ ಮಾಡಿಸಿ ಅದರ ಮೂಲಕ ಮಹಿಳೆಯ ಖಾತೆಗೆ ಸೈಬರ್ ವಂಚನೆಯಿಂದ ಬಂದಿದ್ದ 1.74 ಕೋಟಿ ರೂ.ಅನ್ನು ಹಾಕಿದ್ದಾರೆ. ಬಳಿಕ ಅವರ ಖಾತೆ ಮೂಲಕ ತಮ್ಮ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಳ್ಳುವ ಮೂಲಕ ಮಹಿಳೆಯ ಖಾತೆ ದುರುಪಯೋಗ ಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.