ರಾಯಚೂರಿನ ಸಿರವಾರ ತಾಲೂಕಿನಲ್ಲಿ ಹುಚ್ಚು ತೋಳದ ಕಾಟ: 10ಕ್ಕೂ ಹೆಚ್ಚು ಜನರಿಗೆ ಕಚ್ಚಿದ ತೋಳ

Wolf bite 1 Raichuru 9 FEB 20
Published on

ರಾಯಚೂರು: ಸಿರವಾರ ತಾಲೂಕಿನಲ್ಲಿ ಹುಚ್ಚು ತೋಳದ ಕಾಟದಿಂದ ಕವಿತಾಳ ಸಮೀಪದ ಚಿಲ್ಕರಾಗಿ ಮತ್ತು ಇರಕಲ್ ಗ್ರಾಮಸ್ಥರು ಬೇಸತ್ತು ಹೋಗಿದ್ದರು. ಭಾನುವಾರ ಬೆಳಗ್ಗೆ ಈ ತೋಳ 12 ಜನರಿಗೆ ಕಚ್ಚಿ ಗಾಯಗೊಳಿಸಿದ್ದರಿಂದ ಜನ ಆಕ್ರೋಶಗೊಂಡಿದ್ದರು.

ಚಿಲ್ಕರಾಗಿ ಮತ್ತು ಇರಕಲ್ ಗ್ರಾಮದಲ್ಲಿ ಭಾನುವಾರ ಬೆಳಗ್ಗೆಯೇ ಈ ಘಟನೆ ನಡೆದಿದೆ. ಚಿಲ್ಕರಾಗಿ ಗ್ರಾಮದ ಅಮರಪ್ಪ ಕುಂಬಾರ್, ವೀರಭದ್ರಪ್ಪ ಕುಂಬಾರ್, ಈರಮ್ಮ, ಹುಲುಗಪ್ಪ ಚಲವಾದಿ ಸೇರಿ ಒಂಭತ್ತು ಜನರ ಮೇಲೆ ತೋಳ ಎರಗಿ ಕಚ್ಚಿದ ಕಾರಣ ಎಲ್ಲರೂ ಗಾಯಗೊಂಡಿದ್ದರು. ಇಲ್ಲಿಂದ ಓಡಿ ಹೋದ ತೋಳ ಸಮೀಪದ ಇರ್ಕಲ್ ಗ್ರಾಮಕ್ಕೆ ನುಗ್ಗಿ ಅಲ್ಲಿ ಮೂವರನ್ನು ಕಚ್ಚಿದೆ.

ಅಧಿಕಾರಿಗಳು ಸರಿಯಾಗಿ ಸ್ಪಂದಿಸದ ಕಾರಣ, ಒಟ್ಟಾರೆ ದಾಳಿಯಿಂದ ಆಕ್ರೋಶಗೊಂಡ ಇರ್ಕಲ್ ಗ್ರಾಮಸ್ಥರು ತೋಳವನ್ನು ಬೇಟೆಯಾಡಲು ನಿರ್ಧರಿಸಿದರು. ತೋಳವನ್ನು ಬೆನ್ನಟ್ಟಿ ಅದನ್ನು ಬಡಿದು, ಕಲ್ಲೆಸೆದು ಕೊಂದರು ಎಂದು ಸ್ಥಳೀಯರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net