

ಬೆಳಗಾವಿ: ನಗರದ ಹೋಟೆಲ್ ನಲ್ಲಿ ಕೆಲಸ ಮಗಿಸಿ ಮನೆಗೆ ಹೋಗುವಾಗ ಸದಾಶಿವನಗರದಲ್ಲಿ ಮಹಾದೇವಿ ಕಾರೆಣ್ಣವರಗೆ ರಾಡ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಆರೋಪಿಯನ್ನು ಎಪಿಎಂಸಿ ಪೊಲೀಸರು ಐದು ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಹೇಳಿದರು.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊಲೆಯಾದ ಸ್ಥಳದಲ್ಲಿ ಸಿಕ್ಕ ಸಾಕ್ಷಿಗಳನ್ನು ಸಂಗ್ರಹಿಸಿ ಶ್ರೀನಗರದ ಆಟೋಚಾಲಕ ಸಂತೋಷ ಜಾಧವ (38) ಬಂಧಿತ ಆರೋಪಿ. ಈತನದ್ದು ಹಾಗೂ ಮಹಾದೇವಿಯ ಜೊತೆಗೆ ಪರಿಚಯ ಇತ್ತು. ಹತ್ತು ಸಾವಿರ ರೂ. ಸಾಲದ ಕೊಡುವ ವಿಚಾರದಲ್ಲಿ ಮಹಾದೇವಿಗೆ ರಾಡ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂದರು.
ಕೊಲೆ ಪ್ರಕರಣದಲ್ಲಿ ಉತ್ತಮ ಸಾಕ್ಷ್ಯಗಳು ಹಾಗೂ ಪ್ರತ್ಯೇಕ್ಷದರ್ಶಿಗಳು ಸಿಕ್ಕಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.