ಮಹಿಳೆಯರ ಪ್ರಗತಿಗೆ ಸೆಲ್ಕೋ ಫೌಂಡೇಶನ್ ಸಹಕಾರಿ: ರವಿ ಎನ್.ಬಂಗಾರಪ್ಪನವರ

IMG-20240903-WA0024.jpg
Published on

ಬೆಳಗಾವಿ: ಮಹಿಳೆಯರು ಅಭಿವೃದ್ಧಿ ಹೊಂದಲು ಸೆಲ್ಕೋ (SELCO) ಫೌಂಡೇಶನ್ ಸಹಾಯ- ಸಹಕಾರ ನೀಡುತ್ತಿದ್ದು, ಸ್ವ-ಉದ್ಯೋಗ ಮೂಲಕ ಪುರುಷರಿಗೆ ಸರಿ ಸಮಾನರಾಗಿ ಮಹಿಳೆಯರು ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು NRLM ಜಿಲ್ಲಾ ಯೋಜನಾ ನಿರ್ದೇಶಕರಾದ ರವಿ ಎನ್ ಬಂಗಾರಪ್ಪನವರ ಹೇಳಿದರು.

ನಗರದ ಕುಮಾರ್ ಗಂಧರ್ವ ಕಲಾ ಮಂದಿರದಲ್ಲಿ ಮಂಗಳವಾರ ಸೆಲ್ಕೋ (SELCO) ಫೌಂಡೇಶನ್ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಲಾದ "ಬೆಳಗಾವಿ ಸೌರ ಸ್ವ-ಉದ್ಯೋಗ ಮೇಳ" ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲಾ ಕುಟುಂಬಗಳಲ್ಲಿ ಮಹಿಳೆ ಪಾತ್ರ ಬಹಳ ಮುಖ್ಯವಾಗಿದೆ. ಮಹಿಳೆಯರು ಆರ್ಥಿಕ ಸಬಲತೆ ಹೊಂದಿದಾಗ ಮಾತ್ರ ಹಳ್ಳಿಗಳು ಬಹುಬೇಗ ಅಭಿವೃದ್ಧಿಯಾಗಲಿವೆ. ಮಹಿಳೆಯರು ಕೇವಲ ಹತ್ತು ರೂ. ಸಂಗ್ರಹ ಮಾಡುವ ಮೂಲಕ ಆರಂಭಿಸಿದ ಪ್ರಗತಿ ಮಹಿಳಾ ಸೇವಾ ಸಂಘ ಇಂದು ಕೋಟ್ಯಂತರ ವಹಿವಾಟು ನಡೆಸುತ್ತಿದ್ದಾರೆ. ಇದು ಮಹಿಳೆಯರಲ್ಲಿರುವ ಪ್ರಗತಿ ಮನೋಭಾವ ತೋರಿಸುತ್ತದೆ. ಗ್ರಾಮೀಣ ಭಾಗದಲ್ಲಿ ಎಲ್ಲಾ ಮಹಿಳೆಯರು ಗೃಹ ಕೈಗಾರಿಕಾ ಒತ್ತು ನೀಡಿ, ಸೌರ ಶಕ್ತಿಯಿಂದ ನಿಮ್ಮ ಸ್ವ ಉದ್ಯೋಗವನ್ನು ಜೀವನ ರೂಪಿಸಿಕೊಂಡು. ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಬರಬೇಕು ಎಂದು ಕಿವಿಮಾತು ಹೇಳಿದರು.

ಮಹಿಳೆಯರ ಅಭಿವೃದ್ಧಿಗೆ ಒತ್ತು ಕೊಟ್ಟಿರುವ ಸರ್ಕಾರ ಗ್ರಾಮೀಣ ಮಹಿಳೆಯರ ಅಭ್ಯುದಯಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಸ್ವ ಸಹಾಯ ಗುಂಪುಗಳ ಮೂಲಕ ಒಗ್ಗೂಡುವುದು, ಅದರಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳುವುದು, ಸಂಘದ ಮೂಲಕ ಉಳಿತಾಯ ಮಾಡುವುದು, ಸಮಾಜದ ಏಳ್ಗೆಗೆ ಶ್ರಮಿಸುವುದು ಜವಾಬ್ದಾರಿಯಾಗಿ ಎಂದು ಹೇಳಿದರು.

ಕೃಷಿ ಇಲಾಖೆ ಎಸ್ ಬಿ ಕೊಂಗವಾಡ ಅವರು ಮಾತನಾಡಿ, ಎಲ್ಲಾ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗಬೇಕಾದ್ರೆ ಮಿಶ್ರ ಕೃಷಿಗೆ ಒತ್ತು ನೀಡಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆ ಗಳಿಂದ ಸ್ವ ಉದ್ಯೋಗದತ್ತ ಹೆಚ್ಚು ಗಮನ ಕೊಡಬೇಕು ನಮ್ಮಲ್ಲಿ ಸಿಗುವ ಕಚ್ಚಾ ವಸ್ತುಗಳಯಿಂದ ಉದ್ಯೋಗ ಸೃಷ್ಟಿ ಆಗಲಿವೆ. ಇದರಿಂದ ಆರ್ಥಿಕವಾಗಿ ಹೆಚ್ಚು ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ್ ಅವರು ಮಾತನಾಡಿ, ಸ್ವ- ಉದ್ಯೋಗದಲ್ಲಿ ಯಾವುದು ಹೆಚ್ಚು ಲಾಭ ಬರುತ್ತೆ ಎಂದು ನೋಡುವುದಕ್ಕಿಂತ, ನನ್ನಲ್ಲಿ ಯಾವ ತರಹದ ಕೌಶಲ್ಯ ಇದೆ? ಯಾವ ತರಹದ ನೈಪುಣ್ಯವಿದೆ ಅಂತಹ ಸ್ವ ಉದ್ಯೋಗ ಆಯ್ಕೆ ಮಾಡಿಕೊಳ್ಳಿ ನಮ್ಮ ಭಾಗದಲ್ಲಿ ಬೆಳೆಯುವ ಕೃಷಿಗೆ ಅವಲಂಬಿವಾಗಿರಿ ಅದರಿಂದ ಹೆಚ್ಚು ಲಾಭ ತೆಗೆದುಕೊಳ್ಳಲು ಸಾಧ್ಯ. PMFME ಯೋಜನೆ ನಮ್ಮ ಕರ್ನಾಟಕದಲ್ಲಿ ಬೆಳಗಾವಿ ಪ್ರಥಮ್ ಸ್ಥಾನದಲ್ಲಿ ಇದೆ ಅದಕ್ಕೆ ನೀವು ಹಾಗೂ ಸೆಲ್ಕೋ ಫೌಂಡೇಶನ್ ಅವರು ಕಾರಣರಾಗಿದ್ದೀರಿ ಎಂದು ತಿಳಿಸಿದರು.

ಕೇಂದ್ರ ಕೈಗಾರಿಕಾ ತರಬೇತಿ ಜಂಟಿ ನಿರ್ದೇಶಕರಾದ ಸತ್ಯನಾರಾಯಣ ಭಟ್‌ ಅವರು ಮಾತನಾಡಿ, PM ವಿಶ್ವಕರ್ಮ ಯೋಜನೆಗಳು ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ತರಬೇತಿ ಹಾಗೂ ಯೋಜನೆಗಳನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು. ಇದರಿಂದ ನಿಮ್ಮ ಕುಟುಂಬ ಆರ್ಥಿಕವಾಗಿ ಪ್ರಗತಿ ಹೊಂದಲಿದೆ. ಇದರಿಂದ ನಿಮ್ಮ ಕುಟುಂಬಕೆ ಸಹಾಯ ಸಿಕ್ಕಂತೆ ಆಗುತ್ತದೆ ಎಂದು ಹೇಳಿದರು.

ಪ್ರಸನ್ನ ಹೆಗ್ಡೆ ಅವರು ಪ್ರಸ್ತಾವಿಕ ಮಾತನಾಡಿ, ಎಲ್ಲಾ ಮಹಿಳೆಯರೂ ಆತ್ಮ ನಿರ್ಭರ ಭಾರತಕ್ಕೆ ಕೈ ಜೋಡಿಸಿ ಎಂದು ಹೇಳಿದರು.

ಸೆಲ್ಕೋ (SELCO) ಫೌಂಡೇಶನ್ ವತಿಯಿಂದ ಆಯೋಜಿಸಲಾದ "ಬೆಳಗಾವಿ ಸೌರ ಸ್ವ-ಉದ್ಯೋಗ ಮೇಳದಲ್ಲಿ ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡರು.

ಈ ಸಂದರ್ಭದಲ್ಲಿ ಸಾಂದ್ರ ಮೆಲ್ಲೋ , ಕಿರಣ್ ಶಿಂದೆ, ಚಂದ್ರಶೇಖರ ಮಡಿವಾಳರ, ಪ್ರಕಾಶ್ ಮೇಟಿ, ವಿರೇಶ್, ವಿನಾಯಕ್ ಹೆಡ್ಗೆ. ಹಾಗೂ ಸೆಲ್ಕೋ ಫೌಂಡೇಶನ್ ಮತ್ತು ಸೆಲ್ಕೋ ಇಂಡಿಯಾ ಸಿಬ್ಬಂದಿ ಹಾಗೂ ಇತರರು ಇದ್ದರು. ಬೆಳಗಾವಿ ವಿಭಾಗದ ಮ್ಯಾನೇಜರ ವಿನಾಯಕ ಹೆಗ್ಡೆ ನಿರೂಪಿಸಿದರು. ಪ್ರಕಾಶ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net