ಎದೆಗುಂದದೇ ಕೃಷಿ ಕಾಯಕದಲ್ಲಿ ತೊಡಗಿ

24 HRP 01
ಹರಪನಹಳ್ಳಿ ತಾಪಂ ಸಾಮಾರ್ಥ್ಯ ಸೌಧದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಶಾಸಕಿ ಎಂ.ಪಿ.ಲತಾ ಉದ್ಘಾಟಿಸಿದರು. ಉಪವಿಭಾಗ ಅಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್ ಬಿ ವಿ ಗಿರೀಶ ಬಾಬು, ಪುರಸಭೆ ಅಧ್ಯಕ್ಷೆ ಫಾತೀಮಾಬಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಗಲಿಂಗ, ಮುಖಂಡರಾದ ಮೈದೂರು ರಾಮಣ್ಣ, ಸುಮಾ, ತೋಟಗಾರಿಕೆ ಸಹಾಯಕ ನಿರ್ದೇಶಕ ಜಯಸಿಂಹ ಇತರರಿದ್ದರು.
Published on

ಹರಪನಹಳ್ಳಿ: ರೈತರು ಮೂಲ ಕೃಷಿ ಪದ್ಧತಿಯನ್ನು ಆಳವಡಿಸಿಕೊಂಡು ಉತ್ತಮ ಬೆಳೆ ಬೆಳೆಯುವ ಮೂಲಕ ಹೆಚ್ಚಿನ ಲಾಭ ಪಡೆಯಬೇಕು ಎಂದು ಶಾಸಕಿ ಎಂಪಿ ಲತಾ ಮಲ್ಲಿಕಾರ್ಜುನ ತಿಳಿಸಿದರು.

ಪಟ್ಟಣದ ತಾ.ಪಂ. ಸಾಮಾರ್ಥ್ಯ ಸೌಧದಲ್ಲಿ ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜದಿಂದ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತ ದೇಶದ ಬೆನ್ನೆಲುಬು ಎನ್ನತ್ತೇವೆ. ರೈತರ ಕಷ್ಟ-ಸುಖಗಳನ್ನು ಅರ್ಥಯಿಸಿಕೊಳ್ಳುತ್ತಿಲ್ಲ, ಎಲ್ಲರೂ ಪಟ್ಟಣ ನಗರದಲ್ಲಿ ವಾಸಿಸಲು ಬಯಸುತ್ತಾರೆ. ರೈತ ಮಾತ್ರ ಏನೇ ಕಷ್ಟ ಬಂದರೂ ಎದೆಗುಂದದೇ ಕೃಷಿ ಕಾಯಕದಲ್ಲಿ ತೊಡಗಿ ನಮಗೆಲ್ಲ ಅನ್ನ ಹಾಕಿ ಹೊಟ್ಟೆ ತುಂಬಿಸುತ್ತಿದ್ದಾನೆ. ಭೂಮಿ ತಾಯಿಯನ್ನು ನಂಬಿದರೆ ಎಂದು ಕೈಬಿಡುವುದಿಲ್ಲ. ರೈತರು ತಮ್ಮಮಕ್ಕಳನ್ನು ಉತ್ತಮ ಕೃಷಿಕರನ್ನಾಗಿಸಿ ಬೆಳೆಸಬೇಕು.ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ತಂದೆ-ತಾಯಿಗಳು ಬೇಸರ ಪಡುತ್ತಿದ್ದಾರೆ. ರೈತ ಹೆಣ್ಣು ಮಕ್ಕಳು ಇದನ್ನು ತಿದ್ದಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ಉಮೇಶ ಪ್ರಾಸ್ತಾವಿಕವಾಗಿ ಮಾತನಾಡಿ, ಸಕಲ ಜೀವರಾಶಿಗಳಿಗೆ ಅನ್ನ ಹಾಕುವ ರೈತ ದಿನಾಚರಣೆಯನ್ನು ಪ್ರತಿ ವರ್ಷ ಮಾಜಿ ಪ್ರಧಾನಿ ಚೌಧರಿ ಚರಣ ಸಿಂಗ್ ಜನ್ಮದಿನದಂದು ಆಚರಿಸುತ್ತಾ ಬರಲಾಗಿದೆ. ರೈತರ ಶ್ರಯೋಭಿವೃದ್ಧಿಗೆ ಚರಣ್ ಸಿಂಗ್ ಸಾಕಷ್ಟು ಶ್ರಮಿಸಿದ್ದಾರೆ ಎಂದು ಹೇಳಿದರು.

ರೇಷ್ಮೆ, ತೋಟಗಾರಿಕೆ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ರೈತ ಎಸ್ ಎಂ ಆನಂದ ಮೂರ್ತಿ, ಸೌಭಾಗ್ಯ, ವೆಂಕಮ್ಮ, ಕರಿಂಗಿ ಸುರೇಶ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net