ತಪ್ಪದೆ ಮತ ಚಲಾಯಿಸಬೇಕು

1
ಕಾಗವಾಡದಲ್ಲಿ ಮತದಾನ ಜಾಗೃತಿ ಜಾಥಾಗೆ ಜರುಗಿತು. ಚುನಾವಣಾಧಿಕಾರಿ ಬಸಪ್ಪ ಪೂಜಾರಿ, ಎಸ್.ಬಿ. ಇಂಗಳೆ, ಪ್ರವೀಣ ಪಾಟೀಲ ಇತರರು ಇದ್ದರು.
Published on

ಕಾಗವಾಡ: ಹದಿನೆಂಟು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕಾಗವಾಡ ವಿಧಾನಸಭೆ ಸಹಾಯಕ ಚುನಾವಣಾಧಿಕಾರಿ ಬಸಪ್ಪ ಪೂಜಾರಿ ಹೇಳಿದರು.

ಇಲ್ಲಿನ ತಹಸೀಲ್ದಾರ್ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ತಹಸೀಲ್ದಾರ್ ಎಸ್.ಬಿ.ಇಂಗಳೆ ಮಾತನಾಡಿ, ಸಾರ್ವಜನಿಕರು ಯಾವುದೇ ಆಶೆ-ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಬೇಕು. ಮತದಾನ ಹಕ್ಕನ್ನು ತಪ್ಪದೇ ಚಲಾಯಿಸಬೇಕೆಂದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತದಾನ ಜಾಗೃತಿ ಜಾಥಾ ಜರುಗಿತು.

ಸಹಾಯಕ ಚುನಾವಣಾಧಿಕಾರಿ ಬಸಪ್ಪ ಪೂಜಾರಿ, ತಹಸೀಲ್ದಾರ್ ಎಸ್.ಬಿ.ಇಂಗಳೆ, ತಾಪಂ ಇಒ ಪ್ರವೀಣ ಪಾಟೀಲ, ಸಿಡಿಪಿಒ ಸಂಜಯಕುಮಾರ ಸದಲಗಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಗನ್ನಾಥ ಜೋಶಿ, ಶಿಕ್ಷಣ ಇಲಾಖೆ ದೈಹಿಕ ಪರಿವೀಕ್ಷಕರಾದ ಎಸ್.ಬಿ.ಹಳಿಗೌಡರ, ಬಿ.ಬಿ.ಟೊನಗೆ, ಎಂ.ಆರ್. ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net