ಶಿಸ್ತು ಇಲ್ಲದ್ದಲ್ಲಿ ಜೀವನದಲ್ಲಿ ಭವಿಷ್ಯವಿಲ್ಲ

01-10-Shiva-5
ರಾಯಚೂರಿನ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಹೊಸಪೇಟೆಯ ಶಂಕರ ಆನಂದಸಿಂಗ್ ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕ ಡಾ.ನಾಗಣ್ಣ ಕಿಲಾರಿ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ನಂದಿನಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮಹಾಲಿಂಗ, ಡಾ.ವೆಂಕಟರಾವ್ ಪಲ್ಲಟೆ, ಉಪನ್ಯಾಸಕ ಡಾ.ಬಿ.ವಿಜಯರಾಜೇಂದ್ರ ಇದ್ದರು.
Published on

ರಾಯಚೂರು: ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಅತಿ ಮುಖ್ಯವಾಗಿದೆ. ಗುರು ಹಿರಿಯರ ಜತೆಗೆ ಉತ್ತಮ ಸಂಬಂಧ ಹಾಗೂ ಶಿಸ್ತು ಹೊಂದಿರದ ವಿದ್ಯಾರ್ಥಿ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಹೊಸಪೇಟೆಯ ಶಂಕರ ಆನಂದಸಿಂಗ್ ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕ ಡಾ.ನಾಗಣ್ಣ ಕಿಲಾರಿ ಹೇಳಿದರು.
ಸ್ಥಳೀಯ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ದಿ.ಶಾಂತಾದೇವಿ ಬಸಲಿಂಗಯ್ಯ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಶಿಕ್ಷಣ ಮಾತ್ರ ಕಲಿಯುತ್ತಿದ್ದು, ಶಿಸ್ತು ಮಾಯವಾಗುತ್ತಿದೆ ಎಂದರು.
ಜನರಲ್ಲಿ ಭಾಷಾಭಿಮಾನ ಕೊರತೆ ಎದ್ದುಕಂಡು ಬರುತ್ತಿದ್ದು, ವ್ಯಕ್ತಿತ್ವ ಕಟ್ಟಿಕೊಳ್ಳುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕಾಗಿದ್ದು, ಗುರುವನ್ನು ಮೀರಿಸುವ ಶಿಷ್ಯರಾಗಬೇಕಾಗಿದೆ ಎಂದು ಡಾ.ನಾಗಣ್ಣ ಕಿಲಾರಿ ಹೇಳಿದರು.
ಈ ಸಂದರ್ಭದಲ್ಲಿ ನಂದಿನಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮಹಾಲಿಂಗ, ಡಾ.ವೆಂಕಟರಾವ್ ಪಲ್ಲಟೆ, ಉಪನ್ಯಾಸಕ ಡಾ.ಬಿ.ವಿಜಯರಾಜೇಂದ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net