

ಶಿರಸಂಗಿ: ಬಹುದಿನಗಳ ಬೇಡಿಕೆಯಾಗಿರುವ ಆರೋಗ್ಯ ಕೇಂದ್ರವನ್ನು ಒಂದು ವರ್ಷದಲ್ಲಿ ನಿರ್ಮಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಗ್ರಾಮದ ಶಿರಸಂಗಿಯ ಆರೋಗ್ಯ ಕೇಂದ್ರದ ಆವರಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನಾ ಸಮಾರಂಭದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಆರೋಗ್ಯ ಸಚಿವ ದಿನೇಶ ಗುಂಡೂರಾವ ಅವರನ್ನು ಸಂಪರ್ಕಿಸಿ 3.46 ಕೋಟಿ ರೂ. ಕಾಮಗಾರಿ ತಂದಿದ್ದು ಸಂತಸ ಎನಿಸುತ್ತದೆ ಎಂದರು. ಗ್ರಾಪಂ ಅಧ್ಯ ಮಲ್ಲಪ್ಪ ಕಪಲನ್ನವರ, ಡಿಎಚ್ಒ ಐ.ಪಿ. ಗಡಾದ, ಟಿಎಚ್ಒ ಶ್ರೀಪಾದ ಸಬನೀಸ್, ವೈದ್ಯಾ-ಧಿಕಾರಿ ವಿಜಯಲಕ್ಷಿ$್ಮ ಕೊಳಕಿ, ಪಿಡಿಒ ಪಿ.ಎ್.ಹನಸಿ, ಯುವ ಮುಖಂಡ ಸುರೇಶ ಬಡಗಿಗೌಡ್ರ, ಬಿ.ಎಸ್. ಪಾಟೀಲ, ಮಹಾರಾಜ ಕಣವಿ, ಮಲ್ಲಿಕಾರ್ಜುನ ಗೋರವನಕೊಳ್ಳ, ನೀಲಪ್ಪ ಬೆನಕಟ್ಟಿ, ಮಹಾದೇವಪ್ಪ ಒನಜೋಳ, ಮಾಯಪ್ಪ ಉದಗಟ್ಟಿ, ಉಮೇಶ ಗೌಡರ, ಕೆ.ಜಿ. ಗೋಡಿ, ವಿ.ಜಿ. ಮೇಟಿ, ಹಣಮಂತ ಹೂಲಿ, ಸಿದ್ದು ಪಟ್ಟೇದ, ಅಲ್ಲಾಭ ರಾಮದುರ್ಗ, ಅಜೀಜ ಯಲಿಗಾರ, ಗೋರೇಸಾಬ ನೂಲಗಿ, ಡಾ. ಇಬ್ರಾಹಿಂ ಖಾಲೇಖಾನ್, ಕೆ.ಕೆ. ಗೋಸಬಾಳ, ಈರಪ್ಪ ಮುನವಳ್ಳಿ, ಬಸವರಾಜ ಹತ್ತಿ, ಸಿ.ಡಿ. ಲಿಂಗರಡ್ಡಿ, ಬಸವರಾಜ ರ್ಯಾಮಬಾಳಪ್ಪನವರ, ರಾಚಯ್ಯ ಸತ್ತಿಗೇರಿಮಠ, ಮಲ್ಲು ಮುದ್ನೂರ, ಚನ್ನವಿರಯ್ಯ ಹಿರೇಮಠ ಇತರರಿದ್ದರು.