

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಂಗರಗಾ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಜಲಜೀವನ್ ಮಿಷನ್ ಯೋಜನೆಯಡಿ 1.63 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬುಧವಾರ ಚಾಲನೆ ನೀಡಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಯೋಜನೆ ಮೂಲಕ ಗ್ರಾಮದ ಗಲ್ಲಿಗಳಲ್ಲಿ ಪೈಪ್‌ಲೈನ್‌ಗಳು ಅಳವಡಿಕೆಯಾಗಲಿದ್ದು, ನಲ್ಲಿಗಳ ಮೂಲಕ ಮನೆ-ಮನೆಗಳಿಗೆ ನೀರು ಸರಬರಾಜು ಆಗಲಿದೆ. ಕಾಮಗಾರಿ ಸಮಯದಲ್ಲಿ ಸಾರ್ವ ಜನಿಕರಿಗಾಗಲಿ, ರಸ್ತೆಗಳಿಗಾಗಲಿ ತೊಂದರೆ ಆಬಾರದು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆ ದಾರರಿಗೆ ಸೂಚಿಸಿದರು.
ಗ್ರಾಮಸ್ಥರು ಸಚಿವೆ ಹೆಬ್ಬಾಳ್ಕರ್ ಅವರು ಸನ್ಮಾನಿಸಿದರು. ಗ್ರಾಮದಲ್ಲಿ ಆಗಬೇಕಿರುವ ಕೆಲಸಗಳ ಕುರಿತು ಮಾಹಿತಿ ಪಡೆದರು. ಯುವರಾಜ ಕದಂ, ಬಾಳು ಪಾಟೀಲ, ನಿವೃತ್ತಿ ತಳವಾರ, ಗೋಪಾಲ ಗೋಡಸೆ, ಅರ್ಜುನ ಪಾಟೀಲ, ಹನುಮಂತ ಪಾಟೀಲ, ಮನೋಹರ ಬೆಳಗಾಂವ್ಕರ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್, ಸಂತೋಷ ಕಾಂಬಳೆ, ಸುಭಾಷ ತಳವಾರ, ಉಮೇಶ ಸೊನೋಲ್ಕರ್, ಮಲ್ಲಪ್ಪ ಕಾಂಬಳೆ, ಶಂಕರ ನಾಯ್ಕ, ಮೀನಾ ಘೋಡ್ಸೆ, ಗಾಯತ್ರಿ ಪಾಟೀಲ, ವೈಶಾಲಿ ಖಾಂಡೇಕರ, ಸಿಡಿಪಿಒ ಸುಮಿತ್ರಾ, ಕಾರ್ಯದರ್ಶಿ ಪರಿಮಳ ಇತರರಿದ್ದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬುಧವಾರ ತಮ್ಮ ಬೆಳಗಾವಿಯ ಗೃಹ ಕಚೇರಿಯಲ್ಲಿ ಜನತಾ ದರ್ಶನ ನಡೆಸಿ, ಜನರ ಸಮಸ್ಯೆ ಆಲಿಸಿದರು. ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಜಿಲ್ಲೆಯ ವಿವಿಧ ಭಾಗಗಳ ನೂರಾರು ಜನ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಅನೇಕರು ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.