ಹಿಟ್‌ಆ್ಯಂಡ್ ರನ್ ಕಾಯ್ದೆ ಹಿಂಪಡೆಯಿರಿ

17 TKE 2
ಕೇಂದ್ರ ಸರ್ಕಾರ ಚಾಲಕರ ವಿರುದ್ಧ ಹೊರಡಿಸಿರುವ ಹಿಟ್ ಆ್ಯಂಡ್‌ರನ್ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿ ತರೀಕೆರೆಯಲ್ಲಿ ಲಾರಿ ವಾಹನ ಮಾಲೀಕರು ಹಾಗೂ ಚಾಲಕರು ಪ್ರತಿಭಟಿಸಿದರು.
Published on

ತರೀಕೆರೆ: ಕೇಂದ್ರ ಸರ್ಕಾರ ಚಾಲಕರ ವಿರುದ್ಧ ಹೊರಡಿಸಿರುವ ಹಿಟ್ ಆ್ಯಂಡ್ ರನ್ ಕಾಯ್ದೆ ಹಿಂಪಡೆಯ ಬೇಕು ಎಂದು ಆಗ್ರಹಿಸಿ ಪಟ್ಟಣದ ಲಾರಿ ವಾಹನ ಮಾಲೀಕರು ಹಾಗೂ ಚಾಲಕರು ಬುಧವಾರ ಪಟ್ಟಣದಲ್ಲಿ ಪ್ರತಿಭಟಿಸಿ ತಹಸೀಲ್ದಾರ್ ವಿ.ಎಸ್.ರಾಜೀವ್‌ಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಹಿಟ್ ಆ್ಯಂಡ್ ರನ್ ಕಾಯ್ದೆಯಡಿ ವಿಧಿಸಿರುವ 10 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 7 ಲಕ್ಷ ರೂ. ದಂಡ ಪಾವತಿಯಿಂದ ಹೊಟ್ಟೆಪಾಡಿಗಾಗಿ ದುಡಿಯುವ ಚಾಲಕರಿಗೆ ತೀವ್ರ ಸಮಸ್ಯೆಯಾಗಲಿದೆ. ಆಕಸ್ಮಿಕವಾಗಿ ನಡೆಯುವ ಘಟನೆಗಳಿಗೆ ಚಾಲಕರನ್ನು ಗುರಿ ಮಾಡದೆ ಕಾಯ್ದೆ ನಿಯಮವನ್ನು ಸರಳಗೊಳಿಸಬೇಕು. ಹಿಟ್‌ಆ್ಯಂಡ್ ರನ್ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಲಾರಿ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮುಸ್ತಾ, ಗೌರವಾಧ್ಯಕ್ಷ ಮನ್ಸೂರ್, ಪದಾಧಿಕಾರಿಗಳಾದ ರಹಮತ್, ಶಿವಕುಮಾರ್, ದೇವರಾಜ, ಸಿದ್ದಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net