

ರಾಯಚೂರು: ಜಿಲ್ಲೆಯಲ್ಲಿ ಮರಳು ಸಾಗಣೆ ಮೇಲೆ ಹೇರಿರುವ ನಿಷೇಧವನ್ನು ಹಿಂಪಡೆದುಕೊಂಡು ರಾಜಧನ ಪಾವತಿ ಆಧಾರಿತ ಮರಳು ಸಾಗಣೆಗೆ ಅನುಮತಿ ನೀಡಬೇಕು ಎಂದು ಜಿಲ್ಲಾ ಟಿಪ್ಪರ್ ಮಾಲೀಕರ ಸಂಘ ಒತ್ತಾಯಿಸಿದೆ.
ಸಂಘದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಶುಕ್ರವಾರ ಮನವಿ ಸಲ್ಲಿಸಿ, ಮರಳು ಸಾಗಣೆಯನ್ನು ಕಳೆದ ಏಳು ತಿಂಗಳಿಂದ ನಿಲ್ಲಿಸಿರುವುದರಿಂದ ಟಿಪ್ಪರ್ ಮಾಲೀಕರು ಹಾಗೂ ಚಾಲಕರು ಸಮಸ್ಯೆ ಎದುರಿಸುವಂತಾಗಿದೆ ಎಂದು ದೂರಿದರು.
ಜಿಲ್ಲಾಡಳಿತದಿಂದ ಮರಳು ಯಾರ್ಡ್‌ಗಳನ್ನು ಗುರುತಿಸಿಲಾಗಿದ್ದು, ಈ ಹಿಂದೆ ರಾಜಧನ ಪಾವತಿಸಿ ಮರಳು ಸಾಗಣೆ ಮಾಡಲಾಗುತ್ತಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ರ ವೌಖಿಕ ಆದೇಶದಿಂದ ಮರಳು ಸಾಗಣೆಯನ್ನು ನಿಷೇಧ ಹೇರಲಾಗಿದೆ.
ಇದರಿಂದಾಗಿ ಮನೆ ನಿರ್ಮಾಣ ಹಾಗೂ ಇನ್ನಿತರ ಕಾಮಗಾರಿಗಳು ಮರಳು ಕೊರತೆಯಿಂದ ನಿಲ್ಲುವಂತಾಗಿದೆ. ಜತೆಗೆ ಸರ್ಕಾರಕ್ಕೆ ಪಾವತಿಯಾಗುವ ರಾಜಧನ ಪಾವತಿಯಾಗದಂತಾಗಿದೆ. ಕೂಡಲೇ ಮರಳು ಸಾಗಣೆಗೆ ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘದ ಅಧ್ಯಕ್ಷ ಶಿವಮೂರ್ತಿ ಮಾಲಿಪಾಟೀಲ್, ಪದಾಕಾರಿಗಳಾದ ವೈ.ಎಸ್.ಅಶೋಕ್, ರಾಘವೇಂದ್ರ ರೆಡ್ಡಿ, ಜಿ.ವೀರೇಶ, ಸಂಜಯ್, ಶೇಖ್ ಸಾಬೀರ್, ಕೃಷ್ಣಸಾಗರ್, ಎಸ್.ಎಂ.ನರಸಿಂಹಲು, ಮಹ್ಮದ್ ಆರ್ೀ ಇದ್ದರು.