ಅಲಾಯಿ ಹಾಡಿನೊಂದಿಗೆ ಹೆಜ್ಜೆ ಹಾಕಿದರು

gurgunta moharam
ಗುರುಗುಂಟಾದಲ್ಲಿ 51 ಚಕ್ಕಡಿಗಳನ್ನು ಒಂಟಿ ಎತ್ತು ಎಳೆಯುವ ವೇಳೆ ಸೇರಿದ್ದ ಜನರು.
Published on

ಗುರುಗುಂಟಾ: ಗುರುವಾರ ಸಂಜೆ ಕಟ್ಟಿಗೆ ತುಂಡು ತುಂಬಿದ 51 ಚಕ್ಕಡಿ ಬಂಡಿಗಳನ್ನು ಒಂಟಿ ಎತ್ತು ಎಳೆಯುವ ಮೂಲಕ ಚಾಲನೆ ಸಿಕ್ಕ ಸೈಯದ್ ಕಾಸಿಂ ಸಾತ್ ತಾರಿಖ್ ಸಂಭ್ರಮಕ್ಕೆ ಕಿಚ್ಚು ತುಳಿಯುವ ಮೂಲಕ ಶುಕ್ರವಾರ ಬೆಳಗ್ಗೆ ಸಂಪನ್ನಗೊಂಡಿತು.

ಶುಕ್ರವಾರ ಬೆಳಗಿನ ಜಾವ 5 ಗಂಟೆಯಿಂದ ಚೋಪದಾರ್ ಲಾಲ್ ಸಾಬ್, ಕುಂಟಬಂದಾವಲ್ಲಿ ಲಾಲ್ ಸಾಬ್, ಹಳ್ಳದಲಾಲ್ ಸಾಬ್, ಖುರೈಸಿ ಗಲ್ಲಿಯ ಲಾಲ್ ಸಾಬ್ ಪೀರಲು ದೇವರುಗಳನ್ನಿಡಿದ ಮುಜಾವರ್‌ಗಳು ಮತ್ತು ಹರಕೆ ಹೊತ್ತ ಭಕ್ತರು ಅಂಗ್ನಿಕುಂಡ ಹಾಯ್ದು ಹರಕೆ ತೀರಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು.

ಸೈಯದ್ ಕಾಶಿಮ್ ದರ್ಗಾದವರೆಗೆ ದೀರ್ಘದಂಡ ನಮಸ್ಕಾರದೊಂದಿಗೆ ಕೊಡೆ, ಬೆಳ್ಳಿ ಕುದುರೆ, ಚಿನ್ನವನ್ನು ದರ್ಗಾಕ್ಕೆ ನೀಡಿ ನೈವೇದ್ಯ ಅರ್ಪಿಸಿದರು. ಅಗ್ನಿಕುಂಡದ ಸುತ್ತ ಸಿಂಗರಿಸಿದ ಕೊಡೆಗಳೊಂದಿಗೆ ನಸುಕಿನತನಕ ರೈತರು ಪರಸ್ಪರ ಕೈಹಿಡಿದು ಅಲಾಯಿ ಹಾಡಿನೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಎಎಸ್‌ಐ ರೆಹೇಮಾನ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net