ಶಾಂತಿ ಮಂತ್ರದೊಂದಿಗೆ ಲೋಕ ಸಂಚಾರ

manvi mahaveer
ಭಗವಾನ್ ಮಹಾವೀರ ಜಯಂತಿ ನಿಮಿತ್ತ ಮಾನ್ವಿಯಲ್ಲಿ ಗುರುವಾರ ಮಹಾವೀರ ಭಾವಚಿತ್ರ ಮೆರವಣಿಗೆಗೆ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ಚಾಲನೆ ನೀಡಿದರು. ಪ್ರಮುಖರಾದ ಎಸ್.ಆನಂದ ಕಾಂತಿಲಾಲ್, ಸಂತೋಷ ಮಹಾವೀರ್ ಇದ್ದರು.
Published on

ಮಾನ್ವಿ: ಜಗತ್ತಿಗೆ ಶಾಂತಿ ಸೌಹಾರ್ದ ಮತ್ತು ಅಹಿಂಸಾ ತತ್ವಗಳನ್ನು ಬೋಧಿಸಿದ ಮಹನೀಯ ಭಗವಾನ್ ಮಹಾವೀರ ಎಂದು ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ಹೇಳಿದರು.

ಪಟ್ಟಣದ ಮಹಾವೀರ ಮಂದಿರದ ಆವರಣದಲ್ಲಿ ಗುರುವಾರ ತಾಲೂಕು ಆಡಳಿತ ಹಾಗೂ ಜೈನ್ ಸಮಾಜ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಗವಾನ್ ಮಹಾವೀರರು ಜೈನ ಧರ್ಮದ ಪ್ರಮುಖ ತೀರ್ಥಂಕರರಾಗಿದ್ದಾರೆ. ಶಾಂತಿ ಮಂತ್ರ ಹೇಳುತ್ತ ಲೋಕ ಸಂಚಾರ ಮಾಡಿ ಭಕ್ತರಿಗೆ ನೀತಿಗಳನ್ನು ಬೋಧಿಸುತ್ತಿದ್ದರು ಎಂದರು. ಮಹಾವೀರ ಮಂದಿರದ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಮಹಾವೀರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಉಪತಹಸೀಲ್ದಾರ್ ವಿನಾಯಕರಾವ್, ಜೈನ್ ಸಮುದಾಯದ ಹಿರಿಯರಾದ ಬಾಬುಲಾಲ್ ಮಾಣಿಕ್‌ಚಂದ್, ಗೌತಮ ಕಾಂತಿಲಾಲ್, ಎಸ್.ಆನಂದ ಕಾಂತಿಲಾಲ್, ಸಂತೋಷ ಮಹಾವೀರ್, ಕಿಶೋರ್ ಜೈನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net