

ಚಿಕ್ಕೋಡಿ: ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದಲ್ಲಿ ಸೂಕ್ತ ತಯಾರಿ ನಡೆಸಿದರೆ ಸಾಧನೆ ಸಾಧ್ಯ ಎಂದು ಎಸ್ಎಸ್ಎಸ್ ಸರ್ಕಾರಿ ಪದವಿ ಮಹಾವಿದ್ಯಾಲಯ ಚನ್ನಗಿರಿ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಕಾರ್ತಿಕ ಪಿಸೆ ಹೇಳಿದರು.
ಪಟ್ಟಣದ ಕೆಎಲ್ಇ ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಿಂದ ಜಾಮ್ ಎಕ್ಸಾಂ ತಯಾರಿ ಕುರಿತು ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು. ಜಾಮ್ ಪರೀೆ ರಾಷ್ಟ್ರದ ಅತ್ಯುನ್ನತ ಪರೀೆಯಾಗಿದ್ದು, ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳು, ಬಿಎಸ್ಸಿ ಪದವೀಧರರು ಈ ಪರೀೆ ಎದುರಿಸಲು ಅವಕಾಶವಿದೆ. ಪರೀೆಯಲ್ಲಿ ತೇರ್ಗಡೆಯಾದರೆ ದೇಶದ ಪ್ರತಿಷ್ಠಿತ ಐಐಟಿ, ಐಐಎಂ, ನಾಗರಿಕ ಸೇವಾ ಪರೀೆಗಳಾದ ಐಐಎಸ್, ಕೆಎಎಸ್, ಇಸ್ರೋ, ಡಿಆರ್ಡಿಒ ಸಾರ್ವಜನಿಕ ೇತ್ರಗಳು ಸರ್ಕಾರಿ ಹುದ್ದೆಗಳು, ಡೇಟಾ ಸೈನ್ಸ್ ಆ್ಯಂಡ್ ಅನಾಲಿಸ್ಟ್, ಮಷಿನ್ ಲರ್ನಿಂಗ್ ಆ್ಯಂಡ್ ಎಐ, ಸಂಶೋಧನಾ ೇತ್ರದ ರಿಸ್ಕ್ ಮತ್ತು ಕ್ವಾಂಟಿಟಿ ಅನಾಲಿಸಿಸ್ ಮತ್ತು ಫೈನಾನ್ಸ್, ಬ್ಯಾಂಕ್, ಬಿಎಆರ್ಸಿ, ಟಿಐಎಫ್ಆರ್ ಎನ್ಬಿಎಚ್ಎಂ ಅಂತಹ ವಿವಿಧ ೇತ್ರಗಳಲ್ಲಿ ಉದ್ಯೋಗಾವಕಾಶ ದೊರೆಯುತ್ತವೆ ಎಂದರು.
ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಡಾ.ವಿನಾಯಕ ಮಂಜಲಾಪುರ, ಉಪನ್ಯಾಸಕ ಡಾ.ಮಧುರಾ ಮಂಜಲಾಪುರ, ವಿದ್ಯಾ ಬಸ್ತವಾಡಿ, ಅನ್ನಪೂರ್ಣ ಖೋತ ಇತರರಿದ್ದರು. ಚೈತ್ರ ಕುಂಬಾರ ಸ್ವಾಗತಿಸಿದರು. ಲಕ್ಷಿ$್ಮ ಕೊಕಟನೂರ ನಿರೂಪಿಸಿದರು. ಸಂಪದಾ ಕಂಬಾರ ವಂದಿಸಿದರು.