

ಇಟಗಿ: ಮಕ್ಕಳಿಗೆ ಬಾಲ್ಯದಲ್ಲಿ ನೀಡುವ ಗುಣಮಟ್ಟದ ಶಿಕ್ಷಣ ದೊರೆತರೆ ಗುರಿ ತಲುಪಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ.ತುಬಾಕದ ಹೇಳಿದರು.
ಸಮೀಪದ ಬೈಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಪ್ರಾರಂಭಿಸಿದ ಎಲ್‌ಕೆಜಿ ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನಾ ಸಾಹೇಬ ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ಮಹಾಂತೇಶ ಇಟಗಿ ಮಾತನಾಡಿದರು.
ಮುಖ್ಯಶಿಕ್ಷಕ ಎನ್.ಕೆ.ಮಲಮೆತ್ರಿ, ಗ್ರಾಪಂ ಅಧ್ಯಕ್ಷ ಮಂಜುನಾಥ ಮರೆಪ್ಪಗೋಳ, ಸದಸ್ಯ ಬಸವರಾಜ ಲದ್ದಿಮಠ, ಅಣ್ಣಪ್ಪ ಕಾಪೋಲಿ, ಈರಪ್ಪ ಶಿಂದೊಳ್ಳಿ, ಪಕ್ಕೀರಪ್ಪ ಬೆಳಗಾವಿ, ದುಂಡಪ್ಪ ಕ್ಯಾಸಗೇರಿ, ಕಲ್ಲಪ್ಪ ಹಟ್ಟಿಹೊಳಿ, ಗಂಗಾಧರ ಮುಳಕೂರ ಇತರರಿದ್ದರು. ಜಿ.ಎನ್.ಹಿರೇಮಠ ಸ್ವಾಗತಿಸಿದರು.
ಇ.ಎಸ್.ದಾನಪ್ಪನವರ ವಂದಿಸಿದರು. ಎಂ.ವಿ.ಗಂಗಾಧರಮಠ ನಿರೂಪಿಸಿದರು.