

ಚಿಕ್ಕೋಡಿ: ಭವಿಷ್ಯದಲ್ಲಿ ಮಕ್ಕಳಿಗೆ ಎದುರಾಗಬಹುದಾದ ಸಮಸ್ಯೆ ಹಾಗೂ ಸ್ವಚ್ಛತೆಯ ಬಗ್ಗೆ ಸ್ಪಂದಿಸುವುದು ಹೇಗೆ ಎಂಬುದನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಕಾನೂನು ಮಹಾವಿದ್ಯಾಲಯ ಉಪನ್ಯಾಸಕ ಪಿ.ಎಂ.ಕಮತೆ ಹೇಳಿದರು.
ಇಲ್ಲಿನ ಸಂಜೀವಿನಿ ಅನಾಥಾಶ್ರಮದಲ್ಲಿ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಕಾನೂನು ಸಲಹಾ ಕೋಶ ಮತ್ತು ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಅನಾಥ ಮಕ್ಕಳಿಗೆ ಭವಿಷ್ಯತ್ತಿನ ಸವಾಲುಗಳು ಎಂಬ ವಿಷಯದ ಮೇಲೆ ಈಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಕ್ಷೇತ್ರದಲ್ಲಿ ಸತತ ಪರಿಶ್ರಮ ಮತ್ತು ಅಧ್ಯಯನದಿಂದ ಸಾಧನೆ ಸಾಧ್ಯ ಎಂದರು.
ಸಂಜೀವಿನಿ ಆಶ್ರಮದ ಸಂಚಾಲಕ ಓಂಕಾರ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ದೀಪಾಲಿ ಪಾಟೀಲ, ಸಂಧ್ಯಾ ವಾಘಮೊಡೆ, ಪ್ರತಿಷ್ಠಾ ಶೆಟ್ಟಿ ಇತರರಿದ್ದರು.