ಕನ್ನಡದೊಂದಿಗೆ ಇತರ ಭಾಷೆ ಪ್ರೀತಿಸೋಣ

1blh4 -Web
ಬೈಲಹೊಂಗಲದಲ್ಲಿ ರಾಜ್ಯೋತ್ಸವ ಅಂಗವಾಗಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಶಾಸಕ ಮಹಾಂತೇಶ ಕೌಜಲಗಿ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ, ತಹಸೀಲ್ದಾರ್ ಡಾ. ದೊಡ್ಡಪ್ಪ ಹೂಗಾರ, ಪುರಸಭೆ ಉಪಾಧ್ಯಕ್ಷೆ ಶಶಿಕಲಾ ಹೊಸಮನಿ, ಮಹೇಶ ಹರಕುಣಿ, ವಿಜಯ ಬೋಳಣ್ಣ, ಅಂಬಿಕಾ ಕೊಟಬಾಗಿ, ಶಶಿಕಾಲ, ಹೇಮತಲಾ ಮತ್ತಿತರರಿದ್ದರು.
Published on

ಬೈಲಹೊಂಗಲ: ರಾಜ್ಯೋತ್ಸವ ಅಂಗವಾಗಿ ಪಟ್ಟಣದ ಪುರಸಭೆ ಆವರಣದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ತಾಲೂಕಾಡಳಿತ, ಪುರಸಭೆ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಸಕ ಮಹಾಂತೇಶ ಕೌಜಲಗಿ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ ಮೆರವಣಿಗೆಗೆ ಚಾಲನೆ ನೀಡಿದರು. ತಹಸೀಲ್ದಾರ್ ಡಾ. ದೊಡ್ಡಪ್ಪ ಹೂಗಾರ, ಧ್ವಜಾರೋಹಣ ನೆರವೇರಿಸಿದರು. ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಮಾತೃ ಭಾಷೆ ಕನ್ನಡಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಇತರ ಭಾಷೆಗಳನ್ನು ಪ್ರೀತಿಸುವ ಕೆಲಸವಾಗಬೇಕು ಎಂದರು. ಪುರಸಭೆ ಮುಖ್ಯಾಧಿಕಾರಿ ಕವಿರಾಜ ನಾಗನೂರ, ತಾಲೂಕಾ ಆರೋಗ್ಯ ಅಧಿಕಾರಿ ಡಾ.ಎಸ್.ಎಸ್. ಸಿದ್ದನ್ನವರ, ಪುರಸಭೆ ಉಪಾಧ್ಯಕ್ಷೆ ಶಶಿಕಲಾ ಹೊಸಮನಿ, ಸದಸ್ಯರಾದ ಮಹೇಶ ಹರಕುಣಿ, ವಿಜಯ ಬೋಳಣ್ಣವರ, ಸಾಗರ ಬಾಂವಿಮನಿ, ಸುಧೀರ ವಾಲಿ, ಜಗದೀಶ ಜಂಬಗಿ, ಬುಡ್ಡೆಸಾಬ್, ಶಿರಸಂಗಿ, ಅಂಬಿಕಾ ಕೊಟಬಾಗಿ, ಶಶಿಕಲಾ ಕಲ್ಲೊಳ್ಳಿ, ವಾಣಿಶ್ರೀ ಪತ್ತಾರ, ದಿಲಶಾದಬಿ ನದಾಫ್, ಹೇಮಲತಾ ಹಿರೇಮಠ, ಲಕ್ಷ್ಮೀ ಬಡ್ಲಿ, ಕುಮಾರ ಭರಮಣ್ಣವರ, ಬಸವರಾಜ ಶಿಂತ್ರಿ, ಚಂದ್ರಶೇಖರ ಕೊಪ್ಪದ, ಮಲ್ಲೇಶಿ ಹೊಮನಿ, ಬಿ.ಐ, ಗುಡಿಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net